ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣಾ ಸಿಬ್ಬಂದಿ ಕೊರತೆಇಂದ ವಿಮಾನಯಾನ ರದ್ದು

Spread the love

Mangalore-IArport

ಬೆಂಗಳೂರು, ಏ.11- ತಪಾಸಣಾ ಸಿಬ್ಬಂದಿ ಕೊರತೆಯಿಂದ ವಿಮಾನವೊಂದರ ಹಾರಾಟವನ್ನೇ ರದ್ದುಗೊಳಿಸಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿಂದು ಜರುಗಿದೆ.  ಇಂದು ಮಧ್ಯಾಹ್ನ 12.15ಗಂಟೆಗೆ ಮಂಗಳೂರಿನಿಂದ ಬೆಂಗಳೂರಿಗೆ ಬರಬೇಕಿದ್ದ ಜೆಟ್‍ಏರ್‍ವೇಸ್ ವಿಮಾನದ ಹಾರಾಟವನ್ನು ಕೊನೆಗಳಿಗೆಯಲ್ಲಿ ರದ್ದುಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು ಎಂದು ಮೂಲಗಳು ತಿಳಿಸಿವೆ.  ವಿಮಾನ ನಿಲ್ದಾಣದಲ್ಲಿ ಭದ್ರತೆ, ತಪಾಸಣೆಗಾಗಿ 226 ಮಂದಿ ಸಿಎಸ್‍ಎಫ್ ಯೋಧರನ್ನು ಮಂಜೂರು ಮಾಡಲಾಗಿದ್ದರು ಕರ್ತವ್ಯದಲ್ಲಿರುವುದು 203 ಜನ ಮಾತ್ರ ಎಂದು ತಿಳಿದು ಬಂದಿದೆ.

ಪ್ರಯಾಣಿಕರು, ಸರಕು ಸರಂಜಾಮು ತಪಾಸಣೆ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ವಿಮಾನ ಹಾರಾಟವನ್ನೇ ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಕೊನೆಗಳಿಗೆಯಲ್ಲಿ ವಿಮಾನಯಾನ ರದ್ದಾಗಿದ್ದರಿಂದ ಪರದಾಡಿದ ಪ್ರಯಾಣಿಕರು ಕೂಡಲೇ ಗೃಹ ಇಲಾಖೆ ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin