ಮಂಡ್ಯದಲ್ಲಿ ಸರಗಳ್ಳರ ಕೈ ಚಳಕ

chain
ಮಂಡ್ಯ, ಆ.28- ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ , ದುಷ್ಕರ್ಮಿಗಳು ಇಬ್ಬರು ಮಹಿಳೆಯರಿಂದ ಎರಡೂವರೆ ಲಕ್ಷ ರೂ. ಮೌಲ್ಯದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.   ಜಿ.ಮಾದೇಗೌಡನಗರ ನಿವಾಸಿ ಶಿಕ್ಷಕಿ ಪ್ರೇಮಕುಮಾರಿ ಶಾಲೆ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಬೈಕ್‌ನಲ್ಲಿ ಬಂದ ವ್ಯಕ್ತಿ ಕೊರಳಿಗೆ ಕೈ ಹಾಕಿ 65 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ.  ಈ ವೇಳೆ ಪ್ರೇಮಕುಮಾರಿ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಾಗ ಸ್ಥಳಕ್ಕೆ ಜನರು ದೌಡಾಯಿಸುತ್ತಿದ್ದಂತೆ ಕಳ್ಳ ಕ್ಷಣ ಮಾತ್ರದಲ್ಲಿ ಕಳ್ಳ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.
ಇದಾದ ಎರಡೇ ಗಂಟೆಗಳಲ್ಲಿ ಗುಡಿಗೇರಿ ನಿವಾಸಿ ರಮ್ಯಾ ಎಂಬುವರು ಗಾರ್ಮೆಂಟ್ಸ್ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ ವ್ಯಕ್ತಿ ಈಕೆಯ ಕೊರಳಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.  ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮ್ಯಾಥ್ಯೂಸ್ ಮತ್ತು ಪಿಎಸ್‌ಐ ಕೆ.ಮಂಜು ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಈ ಎರಡೂ ಕಳ್ಳತನಗಳನ್ನು ಒಬ್ಬನೇ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.  ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

 

Sri Raghav

Admin