ಮಂಡ್ಯ, ಮೈಸೂರಿನಲ್ಲಿ ‘ಕಾವೇರಿ’ದ ಕಿಚ್ಚು

X-Mandaya

ಬೆಂಗಳೂರು, ಸೆ.7- ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದ ಮಂಡ್ಯ, ಮೈಸೂರು ಸೇರಿದಂತೆ ಬೆಂಗಳೂರಿನಲ್ಲೂ ಪ್ರತಿಭಟನೆಯ ಕಾವು ಹೆಚ್ಚಾಗಿದೆ.  ನಿನ್ನೆ ಕರ್ನಾಟಕ-ತಮಿಳುನಾಡು ಗಡಿಯ ಆನೇಕಲï ಬಳಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಜೋರಾಗಿತ್ತು. ಇದರಿಂದ ತಮಿಳುನಾಡಿನ ಲಾರಿ ಚಾಲಕರು ಹೆದರಿ ಮಧ್ಯರಾತ್ರಿವರೆಗೂ ನೆಲಮಂಗಲದ ಮಾದವಾರ, ಮಾಕಳಿ, ಕುಣಿಗಲ್ ಬೈಪಾಸ್ ಬಳಿ ನಿಂತಲ್ಲೇ ನಿಂತಿದ್ದರು. ರಾತ್ರಿ ನಗರಕ್ಕೆ ಪ್ರವೇಶಿಸದೆ ನೆಲಮಂಗಲದ ಬೈಪಾಸ್ ಹಾಗೂ ಅತ್ತಿಬೆಲೆ ಬಳಿಯೇ ಲಾರಿಗಳನ್ನು ನಿಲ್ಲಿಸಿ ಚಾಲಕರು ಉಳಿದಿದ್ದರು. ಇನ್ನು ತಮಿಳುನಾಡಿನಿಂದ ಕರ್ನಾಟಕದಲ್ಲಿ ವಹಿವಾಟಿಗೆ ಬಂದಿದ್ದ ಲಾರಿ ಚಾಲಕರು ಸಹ ಕಾವೇರಿ ಗಲಾಟೆಯ ಪರಿಸ್ಥಿತಿಯನ್ನ ಅರಿತು ಮಧ್ಯರಾತ್ರಿ ನಂತರ ನೈಸ್ ರೋಡ್ ಮೂಲಕ ತಮಿಳುನಾಡಿಗೆ ವಾಪಸ್ಸಗಿದ್ದು ಕಂಡು ಬಂತು.

ಮಳವಳ್ಳಿಯಲ್ಲಿ ಬುಗಿಲೆದ್ದ ಆಕ್ರೋಶ

ಮಳವಳ್ಳಿ, ಸೆ.7- ರಾಜ್ಯದಲ್ಲಿ ಮಳೆಯಿಲ್ಲದೆ ತೀವ್ರ ಬರಗಾಲ ಎದುರಾಗಿ ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಿರುವಾಗ ಸಾಂಬ ಬೆಳೆಗಾಗಿ ತಮಿಳು ನಾಡಿಗೆ 13 ಟಿ ಎಂ ಸಿ ನೀರು ಬಿಡುವಂತೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್‍ನ ತೀರ್ಪಿನ ವಿರುದ್ದ ಜಿಲ್ಲಾ ಕಾವೇರಿ ಹಿತರಕ್ಷಣಾ ಸಮಿತಿ ಕರೆ ನೀಡಿರುವ ಮಂಡ್ಯ ಜಿಲ್ಲಾ ಬಂದ್‍ಗೆ ಮಳವಳ್ಳಿ ತಾಲ್ಲೂಕಿನಲ್ಲೂ ಸಹ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.  ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿಮುಂಗಟ್ಟುಗಳು ಸಿನಿಮಾ ಮಂದಿರಗಳು, ವಾಣಿಜ್ಯ ಸಂಸ್ಥೆಗಳು ಸಂಪೂರ್ಣ ಮುಚ್ಚಿದ್ದು ಬಂದ್‍ಗೆ ತಮ್ಮ ಬಂದ್‍ಗೆ ತಮ್ಮ ಒಕ್ಕೊರಲ ಬೆಂಬಲ ಸೂಚಿಸಿವೆ.

ಸರ್ಕಾರಿ ಕಚೇರಿಗಳು ತೆರೆದಿದ್ದವಾದರೂ ಜನರಲ್ಲಿದೆ ಬಿಕೋ ಎನ್ನುತ್ತಿದ್ದವು. ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಪಟ್ಟಣದಾದ್ಯಂತ ಬೈಕ್ ರ್ಯಾಲಿ ನಡೆಸಿದರಲ್ಲದೆ ರ್ಯಾಲಿಯುದ್ದಕ್ಕೂ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತ, ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ತಮ್ಮ ಸ್ವಾರ್ಥ ಹಾಗೂ ಅಧಿಕಾರ ಲಾಲಸೆಗಾಗಿ ತಮಿಳು ನಾಡಿಗೆ ಕದ್ದು ನೀರುಬಿಟ್ಟು ರಾಜ್ಯದ ಜನತೆಗೆ ಕುಡಿಯಲು ಸಹ ನೀರಿಲ್ಲದಂತೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೇಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಮಾಜಿ ಶಾಸಕ ಡಾ. ಅನ್ನದಾನಿ ಎಚ್ಚರಿಸಿದರು.

ಜಿಪಂ ಸದಸ್ಯರಾದ ರವಿ ಕಂಸಾಗರ, ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ, ಎಂ.ಎ. ಚಿಕ್ಕರಾಜು, ರೈತ ಮುಖಂಡರಾದ ಶ್ರೀನಿವಾಸ್, ದೇವರಾಜು, ದುಗ್ಗನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಮಲ್ಲೇಗೌಡ, ಟಿ. ನಂದಕುಮಾರ್, ಆನಂದ್, ಕಂಬರಾಜು, ಜಯಕರ್ನಾಟಕ ಸಂಘಟನೆಯ ಎಂ. ನಾಗೇಶ್, ಬಿಜೆಪಿ ಮುಖಂಡರಾದ ಅಪ್ಪಾಜಿಗೌಡ ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Sri Raghav

Admin