ಮಕ್ಕಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ತಿಳಿಸಿ
ಚಿಕ್ಕಬಳ್ಳಾಪುರ, ಆ.9-ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸರಿಯಾಗಿ ಮಕ್ಕಳಿಗೆ ಅರ್ಥೈಸಬೇಕಾದ ಅನಿವಾರ್ಯ ಇದೆ ಎಂದು ಅಜ್ಜವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್ ಹೇಳಿದರು. ಶಾಲೆಯಲ್ಲಿ ಮಕ್ಕಳ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಚುನಾವಣಾ ಪ್ರಕ್ರಿಯೆ ಮಾಹಿತಿ ನೀಡಿ ಮಾತನಾಡಿದ ಅವರು, ಇಂದಿನ ಚುನಾವಣಾ ವ್ಯವಸ್ಥೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಉಂಟು ಮಾಡಬೇಕಾಗಿರುವುದು ಅನಿವಾರ್ಯ ಎಂದು ತಿಳಿಸಿದರು.
ಸಂಸತ್ ಸಂಪುಟದ ಸಚಿವರಾಗಿ ಆಯ್ಕೆಯಾದರು ಪ್ರಧಾನ ಮಂತ್ರಿಯಾಗಿ ಎನ್.ದಿಲೀಪ್ಕುಮಾರ್, ಉಪ ಪ್ರಧಾನಿಯಾಗಿ ದೀಕ್ಷಿತಾ, ಆರೋಗ್ಯ ಸಚಿವರಾಗಿ ರಂಜಿತ್, ಸ್ವಚ್ಚತಾ ಮಂತ್ರಿಯಾಗಿ ನಂದನ್ಕುಮಾರ್, ನೀರಾವರಿ ಸಚಿವರಾಗಿ ವಿ.ಅರ್ಚನಾ, ಶಿಕ್ಷಣ ಸಚಿವರಾಗಿ ಚೇತನ್ಕುಮಾರ್ ವಿ., ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸಚಿವರಾಗಿ ಅಂಬಿಕಾ ಆರ್ ಗಣಕ ಮತ್ತು ತಂತ್ರಜ್ಞಾನ ಸಚಿವರಾಗಿ ಮನೋಜ್ ಪರಿಸರ ಸಚಿವರಾಗಿ ಹೇಮಂತ್ ಮತ್ತು ಮಾನಸ ಆಯ್ಕೆಯಾದರು. ಶಾಲಾ ಸಹ ಶಿಕ್ಷಕರಾದ ಎನ್.ಶಶಿಕಲಾ, ಪುಷ್ಪಲತಾ, ಭಾಗ್ಯ, ಲಲಿತಮ್ಮ, ಮಂಜುಳಾ, ರವೀಂದ್ರಬಾಬು ಸೇರಿದಂತೆ ಇನ್ನಿತರ ಶಿಕ್ಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.