ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ಕೊಡಿಸಿ

Spread the love

kr--pete-6

ಕೆ.ಆರ್.ಪೇಟೆ, ಆ.15- ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಿಸುವ ಬದಲು ಅವರ ಜ್ಞಾನ ವಿಕಾಸಕ್ಕೆ ಉತ್ತಮ ಪುಸ್ತಕಗಳನ್ನು ಕೊಡಿಸಬೇಕು. ಈ ಮೂಲಕ ಮಕ್ಕಳ ಕೈಯಲ್ಲಿ ಮೊಬೈಲ್ ಕಾಣುವ ಬದಲು ಪುಸ್ತಕಗಳು ಕಾಣುವಂತಾಗಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮ ಕುಮಾರಿ ಕರೆ ನೀಡಿದರು.ಪಟ್ಟಣದ ಪುರಸಭೆ ಕಾಂಪ್ಲೆಕ್ಸ್‍ನ ತಾಲೂಕು ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಪುಸ್ತಕಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪುಸ್ತಕಗಳು ಸದಾ ನಮ್ಮೊಂದಿ ಗಿರುವ ಅತ್ಯುತ್ತಮ ಸ್ನೇಹಿತ. ಪುಸ್ತಕಂ ಹಸ್ತ ಭೂಷಣಂ ಎನ್ನುವ ನೀತಿಯನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು. ಕೈಯಲ್ಲಿ ಒಂದು ಪುಸ್ತಕವಿದ್ದರೆ ಕಾಣುವ ಸಂಸ್ಕಾರ ಮೊಬೈಲ್ ಹಿಡಿದರೆ ಕಾಣುವುದಿಲ್ಲ. ಪುಸ್ತಕಗಳು ಜ್ಞಾನದ ದೀವಿಗೆಗಳಾಗಿದ್ದು ಮನುಷ್ಯನ ಸರಿ-ತಪ್ಪುಗಳನ್ನು ವಿಮರ್ಶಿಸಿ ಸರಿ ದಾರಿಯಲ್ಲಿ ಹೋಗಲು ಸಹಕಾರಿ ಯಾಗಿವೆ ಎಂದು ಅಭಿಪ್ರಾಯ ಪಟ್ಟರು.ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸಕ್ಕೆ ಹಾಗೂ ಜ್ಞಾನಭಂಡಾರದ ಸಾಮಥ್ರ್ಯದ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕಿದೆ. ಪುಸ್ತಕಗಳ ಓದುವುದನ್ನು ಜೀವನದ ಪ್ರಮುಖ ಹವ್ಯಾಸವನ್ನಾಗಿ ಮಾಡಿಕೊಳ್ಳಿ. ಜ್ಞಾನವನ್ನು ಅರಸಿ ಬರುವ ಓದುಗರಿಗೆ ಗ್ರಂಥಾಲಯವು ದೇವಾಲಯಕ್ಕಿಂತಲೂ ಶ್ರೇಷ್ಠವಾಗಿದೆ ಎಂದು ತಿಳಿಸಿದರು.
ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಪ್ರಭಂಧ ಸ್ಪರ್ಧೆ ಹಾಗೂರಂಗೋಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪುರಸಭೆಯ ಸದಸ್ಯ ಡಿ.ಪ್ರೇಮಕುಮಾರ್, ಮುಖ್ಯ ಗ್ರಂಥಪಾಲಕ ಮರೀಗೌಡ ಮತ್ತಿತರರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin