ಮಕ್ಕಳ ಹಕ್ಕು ಉಲ್ಲಂಘನೆ ಸಂಬಂಧಿಸಿದಂತೆ 4,200 ದೂರು ದಾಖಲು

Children--01

ನವದೆಹಲಿ, ಮಾ.24- ಕಳೆದ ಮೂರು ವರ್ಷಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 4200 ದೂರುಗಳು ದಾಖಲಾಗಿದ್ದು, ಇದರಲ್ಲಿ 1237 ಮಕ್ಕಳ ಮೇಲೆ ಎಸಗಲಾದ ದುರಾಚಾರ ಪ್ರಕರಣಗಳಾಗಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರು ಲೋಕಸಭೆಯಲ್ಲಿ ಈ ಕುರಿತು ಅಂಕಿ-ಅಂಶ ನೀಡಿದ್ದಾರೆ. 2016-17ರಲ್ಲಿ (ಫೆಬ್ರವರಿ 2017ರವರೆಗೆ) ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗದಿಂದ 507 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin