ಮಗನ ನೆರವಿಗೆ ಬಾರದ ಸಾರ್ವಜನಿಕರ ವಿರುದ್ಧ ನಟ ಜಗ್ಗೇಶ್ ಬೇಸರ

Spread the love

Jaggesh--01

ಬೆಂಗಳೂರು, ಆ.14-ನನ್ನ ಮಗನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಸಹಾಯಕ್ಕೆ ಧಾವಿಸಬಹುದಿತ್ತು. ಎಲ್ಲರೂ ನಮಗ್ಯಾಕೆ ಎನ್ನುವ ಮನೋಧೋರಣೆಯಲ್ಲಿರುತ್ತಾರೆ. ಹಾಗಾಗಿ ಇಂತಹ ಘಟನೆಗಳು ನಡೆಯುತ್ತವೆ. ಯಾವುದೇ ದುಷ್ಕøತ್ಯಗಳು ನಡೆಯುವಾಗ ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಿ, ವಾಟ್ಸಪ್‍ಗಳಲ್ಲಿ ಹರಿಯಬಿಡುವುದು ನಡೆಯುತ್ತಿರುತ್ತದೆ. ಆದರೆ ಇಂತಹ ಪರಿಸ್ಥಿತಿಗಳಲ್ಲಿ ನೆರವಿಗೆ ಯಾರೂ ಧಾವಿಸುವುದಿಲ್ಲ ಎಂದು ಚಿತ್ರನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದರು.

ಇಂದು ನನ್ನ ಮಗನ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಯಾರಾದರೂ ನೆರವಿಗೆ ಧಾವಿಸಿದ್ದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲವೇನೋ? ಆದರೂ ಆತ ಕ್ರೀಡಾಪಟು. ಅವರು ಇರಿದ ಚಾಕು ಹೊಟ್ಟೆಗೆ ತಗುಲಬೇಕಿತ್ತು. ಆದರೆ ಎಗರಿರುವುದರಿಂದ ಕಾಲಿನ ತೊಡೆ ಭಾಗಕ್ಕೆ ತಗುಲಿದೆ. ಅಂತಹ ಏನೂ ಅನಾಹುತವಾಗಿಲ್ಲ, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಜಗ್ಗೇಶ್ ಸುದ್ದಿಗಾರರಿಗೆ ತಿಳಿಸಿದರು.

ಯಾವುದೇ ವೈಯಕ್ತಿಕ ದ್ವೇಶದಿಂದ ಹಲ್ಲೆ ನಡೆದಿಲ್ಲ. ದುಷ್ಕರ್ಮಿಗಳು ಯಾರೇ ಇರಲಿ ಹಿಡಿದು ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಯಾರಿಗೂ ಭಯವಿಲ್ಲದಂತಾಗಿದೆ. ಯಾರ ಸಂಕಷ್ಟಕ್ಕೂ ಯಾರೂ ನೆರವಿಗೆ ಬಾರದಂತ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹೀಗಾಗಬಾರದು ಎಂದು ಹೇಳಿದರು.

Facebook Comments

Sri Raghav

Admin