ಮಠದ ಆಸ್ತಿ ಕಬಳಿಕೆ ವಿಚಾರ : ಕಾರ್ಪೊರೇಟರ್ ಮೇಲೆ ಹಲ್ಲೆ ನಡೆಸಿದ  ಇಬ್ಬರು ಪೊಲೀಸ್ ವಶಕ್ಕೆ 

Spread the love

ಮೈಸೂರು, ಫೆ.10-ಮಠದ ಆಸ್ತಿ ಕಬಳಿಕೆ ವಿಚಾರವಾಗಿ ಜಗಳ ನಡೆದು ಕಾರ್ಪೊರೇಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ವ್ಯಕ್ತಿ ಸೇರಿ ಇಬ್ಬರನ್ನು ದೇವರಾಜ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ನಗರದ ಶಿವರಾಮ ಪೇಟೆಯಲ್ಲಿರುವ ಭೈರವಿ ಮಠಕ್ಕೆ ಸೇರಿದ ನಿವೇಶನದಲ್ಲಿ ಬಾಬುಲಾಲ್ ಎಂಬುವರು ಕಾಂಪೌಂಡನ್ನು ನಿರ್ಮಿಸಿದ್ದರು.ಈ ಸ್ಥಳ ನಿಮಗೆ ಸೇರಿದ್ದಲ್ಲ ಎಂದು ಕಾರ್ಪೊರೇಟರ್ ಪ್ರಶಾಂತಗೌಡ ಅವರು ಅಕ್ರಮ ಕಾಂಪೌಂಡ್ ಎಂದು ಪಾಲಿಕೆ ವತಿಯಿಂದ ಅದನ್ನು ಮೊನ್ನೆ ತೆರವುಗೊಳಿಸಿದ್ದರು.

ನಿನ್ನೆ ರಾತ್ರಿ ಪ್ರಶಾಂತ್‍ಗೌಡ ಅವರು ಮಠದ ಬಳಿ ಬರುತ್ತಿದ್ದಾಗ ಬಾಬುಲಾಲ್, ರಮೇಶ್ ಸೇರಿದಂತೆ 5 ಮಂದಿಯ ಗುಂಪು ಹಲ್ಲೆ ನಡೆಸಿದೆ.ಈ ಸಂಬಂಧ ಪ್ರಶಾಂತಗೌಡ ಅವರು ದೇವರಾಜ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.ತನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ, ತಾನು ಧರಿಸಿದ್ದ 80 ಗ್ರಾಂ ಸರ ಕಸಿದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಬಾಬುಲಾಲ್ ಮತ್ತು ರಮೇಶ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.ಠಾಣೆಗೆ ಭೇಟಿ ನೀಡಿದ ಮೂಡಾ ಅಧ್ಯಕ್ಷ ಧೃವಕುಮಾರ್ಕ್, ಮೇಯರ್ ರವಿಕುಮಾರ್, ಕಾರ್ಪೊರೇಟರ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ  ಕ್ರಮಕೈಗೊಳ್ಳಬೇಕು  ಒತ್ತಾಯಿಸಿದ್ದಾರೆ.ಮಠವನ್ನು ಮುಜರಾಯಿ ಇಲಾಖೆ ತನ್ನ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿ ದ್ದಾರೆ.

ಪ್ರತಿಭಟನೆ : ಕಾರ್ಪೊರೇಟರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತ್ರಿಪುರ ಭೈರವಿ ಮಠದ ಬಳಿ ಪ್ರತಿಭಟನೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin