ಮಣಿಪುರದಲ್ಲಿ ಬಹುಮತ ಸಾಬೀತು ಮಾಡಿದ ಬಿಜೆಪಿ : ಬಿರೇನ್ ಸಿಂಗ್ ಪರ್ವ ಆರಂಭ

manipur-CM

ಇಂಫಾಲ, ಮಾ.20-ಈಶಾನ್ಯ ರಾಜ್ಯ ಮಣಿಪುರದಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚನೆಗಾಗಿ ಹಕ್ಕು ಮಂಡಿಸಿದ್ದ ಭಾರತೀಯ ಜನತಾಪಕ್ಷ ಬಹುಮತ ಸಾಬೀತು ಮಾಡಿದೆ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾವತ್ ವಿಶ್ವಾಸಮತದಲ್ಲಿ ಗೆದ್ದಿದ್ದಾರೆ. 33-27ರಲ್ಲಿ ಬಿಜೆಪಿ ಬಹುಮತ ಗಳಿಸಿದ್ದು, ಮಣಿಪುರದಲ್ಲಿ ಕಮಲ ಪರ್ವ ಆರಂಭವಾಗಿದೆ.   ಮಣಿಪುರ ವಿಧಾನಸಭೆಯ ವಿಶೇಷ ಆಧಿವೇಶ ಆರಂಭವಾಗುತ್ತಿದ್ದಂತೆ ಬಿಜೆಪಿಯ ಯುಮ್‍ನಮ್ ಕೇಮ್‍ಚಂದ್ ಸಿಂಗ್ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದರು. ನಂತರ ಅವರು ಬಹುಮತ ಸಾಬೀತು ಮಾಡುವಂತೆ ಬಿರೇನ್ ಸಿಂಗ್ ಅವರಿಗೆ ಸೂಚಿಸಿದರು.

ಮಣಿಪುರದಲ್ಲಿ ಸರ್ಕಾರ ರಚಿಸಲು 31 ಶಾಸಕರ ಅಗತ್ಯವಿತ್ತು. ತನಗೆ 33 ಶಾಸಕರ ಬೆಂಬಲ ಇದೆ ಎಂದು ಬಿಜೆಪಿ ಹೇಳಿಕೊಂಡಿತ್ತು. ನಾಗಾ ಪೀಪಲ್ಸ್ ಫ್ರಂಟ್ (ಎನ್‍ಪಿಎಫ್) 4 ಶಾಸಕರು, ನ್ಯಾಷನಲ್ ಪೀಪಲ್ ಪಾರ್ಟಿ (ಎನ್‍ಪಿಪಿ) 4, ಎಲ್‍ಜೆಪಿ 1, ತೃಣಮೂಲ ಕಾಂಗ್ರೆಸ್ ಹಾಗೂ ಪಕ್ಷೇತರ ತಲಾ ಒಬ್ಬರು ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ಧಾರೆ. ಕಾಂಗ್ರೆಸ್‍ನ ಶಾಸಕೊಬ್ಬರೂ ಸಹ ಬಿಜೆಪಿ ಪರ ಬೆಂಬಲ ಘೋಷಿಸಿದ್ದರು.   ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದ್ದರೂ ಅತಂತ್ರ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಸ್ಥಳೀಯ ಪಕ್ಷಗಳು ಮತ್ತು ಪಕ್ಷೇತರರ ಬೆಂಬಲದಿಂದ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿತ್ತು.

ಮಣಿಪುರ ವಿಧಾನಸಭೆಯ 60 ಸ್ಥಾನಗಳ ಪೈಕಿ ಬಿಜೆಪಿ 21, ಕಾಂಗ್ರೆಸ್ 28 ಸ್ಥಾನ ಗೆದ್ದಿದೆ. ನಾಗಾ ಪೀಪಲ್ಸ್ ಫ್ರಂಟ್ ಸೇರಿದಂತೆ ಇತರ ಸ್ಥಳೀಯ ಪಕ್ಷಗಳ ಬೆಂಬಲ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹೀಗಾಗಿ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಿದ್ದ ರಾಜ್ಯಪಾಲೆ ನಜÁ್ಮ ಹೆಫ್ತುಲ್ಲಾ, ಇಂದು ಬಹುಮತ ಸಾಬೀತು ಮಾಡುವಂತೆ ಸಿಂಗ್‍ಗೆ ಸೂಚಿಸಿದ್ದರು.

ಪತ್ರಕರ್ತನಿಂದ ಸಿಎಂ ಹುದ್ದೆ ತನಕ :

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಬಿರೇನ್ ಸಿಂಗ್ ರಾಷ್ಟ್ರಮಟ್ಟದ ಫುಟ್ಬಾಲ್ ಆಟಗಾರ ಹಾಗೂ ಪತ್ರಕರ್ತರಾಗಿದ್ದರು. 1981ರಲ್ಲಿ ದುರಾಂಡ್ ಕಪ್ ಪಂದ್ಯಾವಳಿಯಲ್ಲಿ ಗಡಿ ಭದ್ರತಾ ಪಡೆ ಪರವಾಗಿ ಆಡಿ ಗೆಲುವಿಗೆ ಕಾರಣರಾಗಿದ್ದರು. ಕಳೆದ 17 ವರ್ಷಗಳ ಹಿಂದೆ ರಾಜಕೀಯ ರಂಗ ಪ್ರವೇಶಿಸಿದ್ದ ಸಿಂಗ್, 2002ರಲ್ಲಿ ಡೆಮಾಕ್ರಟಿಕ್ ರೆವಲ್ಯೂಷನರಿ ಪೀಪಲ್ಸ್ ಪಾರ್ಟಿಯಿಂದ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು. 2003ರಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಕಳೆದ ವರ್ಷ ಅಕ್ಡೋಬರ್‍ನಲ್ಲಿ ಬಿಜೆಪಿಗೆ ಸೇರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin