ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ ಹತೋಟಿಗೆ ಕೇಂದ್ರದಿಂದ 4 ಸಾವಿರ ಪ್ಯಾರಮಿಲಿಟರಿ ಸಿಬ್ಬಂದಿ ರವಾನೆ

Manipur

ಇಂಪಾಲ್ ಡಿ.26 : ಮಣಿಪುರ ವಿಧಾನಸಭೆಯಲ್ಲಿ ಕೆಲವು ಮಸೂದೆಗಳಿಗೆ ಅಂಗೀಕಾರ ನೀಡಿದ್ದನ್ನು ಖಂಡಿಸಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ 4 ಸಾವಿರ ಪ್ಯಾರಮಿಲಿಟರಿ ಸಿಬ್ಬಂದಿಯನ್ನು ಕಳುಹಿಸಿದೆ. ಸದ್ಯ ಮಣಿಪುರದಿಂದ ನಾಗಲ್ಯಾಂಡ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗಾ ಸಮೂದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ನವೆಂಬರ್ 1 ರಿಂದ ಯುನೈಟೆಡ್ ನಾಗ ಕೌನ್ಸಿಲ್(ಯುಎನ್ಸಿ) ಮಣಿಪುರದಲ್ಲಿ ಆರ್ಥಿಕ ದಿಗ್ಬಂದನ ಹೇರಿದೆ. ಇನ್ನು ಯುಎನ್ಸಿ ಇಂಪಾಲ್-ಧಿಮಾಪುರ್ ರಾಷ್ಟ್ರೀಯ ಹೆದ್ದಾರಿ-2, ಇಂಪಾಲ್-ಜಿರಿಬಾಮ್ ರಾಷ್ಟ್ರೀಯ ಹೆದ್ದಾರಿ-37ಅನ್ನು ಕಳೆದ 55 ದಿನಗಳಿಂದ ಬಂದ್ ಮಾಡಿದೆ.

ಕಳೆದೆರೆಡು ತಿಂಗಳಿನಿಂದ ಹಿಂಸಾಚಾರ ನಡೆಸುತ್ತಿದ್ದು ಬಂದ್ ಆಗಿರುವ ರಾಷ್ಟ್ರೀಯ ಹೆದ್ದಾರಿ ತೆರವುಗೊಳಿಸುವ ಸಲುವಾಗಿ ಪ್ಯಾರಮಿಲಿಟರಿ ಪಡೆಯನ್ನು ಮಣಿಪುರಕ್ಕೆ ಕಳುಹಿಸಲು ಕೇಂದ್ರ ಮುಂದಾಗಿದೆ.  ಭೂ ಕಂದಾಯ ಮತ್ತು ಭೂ ಸುಧಾರಣೆ ಮಸೂದೆ, ಮಣಿಪುರ ಅಂಗಡಿಗಳು ಮತ್ತು ಸಂಸ್ಥೆ ಮಸೂದೆ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು.

Eesanje News 24/7 ನ್ಯೂಸ್ ಆ್ಯ

Sri Raghav

Admin