ಮಣಿಪುರದಲ್ಲಿ ಮೋದಿ ಭಾಷಣ ಮಾಡಬೇಕಿದ್ದ ಜಾಗದಲ್ಲಿ ಬಾಂಬ್‍ಗಳು ಪತ್ತೆ..!

Modi-Bomb--01

ಇಂಫಾಲ್,ಫೆ.24– ಮಣಿಪುರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ನಾಳೆ ಭಾಷಣ ಮಾಡಲಿದ್ದು , ಅದಕ್ಕೆ ಮುನ್ನವೇ ರಾಜಧಾನಿ ಇಂಫಾಲದಲ್ಲಿ ಹ್ಯಾಂಡ್ ಗ್ರೇನೈಡ್ ಮತ್ತು ಬಾಂಬ್‍ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.   ಬಿಜೆಪಿ ಅಭ್ಯರ್ಥಿ ಸೊಯಿಬಂಬ್ ಸುಭಾಷ್‍ಚಂದ್ರ ಅವರ ನಿವಾಸದ ಪ್ರವೇಶದ್ವಾರದ ಬಳಿ ಚೀನಿ ತಯಾರಿಕೆಯ ಹ್ಯಾಂಡ್ ಗ್ರೇನೈಡ್ ಮತ್ತು ಬಿಜೆಪಿ ಮುಖಂಡ ಸುನೀಲ್ ಅವರ ನಿವಾಸದ ಬಳಿ ಮತ್ತೊಂದು ಬಾಂಬ್ ಪತ್ತೆಯಾಗಿದೆ. ಮೋದಿಯವರ ಭೇಟಿ ವಿರೋಧಿಸಿ ನಾಳೆ ಮಣಿಪುರ ಬಂದ್‍ಗೆ 6 ಬಂಡುಕೋರ ಸಮೂಹದ ಒಕ್ಕೂಟವು ಕರೆ ನೀಡಿರುವ ಬೆನ್ನಲ್ಲೇ ಈ ಬಾಂಬ್‍ಗಳು ಪತ್ತೆಯಾಗಿದ್ದು , ಆತಂಕಕ್ಕೆ ಕಾರಣವಾಗಿದೆ.

ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಇಂಫಾಲ ಪಶ್ಚಿಮ ಜಿಲ್ಲೆಯ ಲಾಂಗ್‍ಜಿಂಗ್ ಅಚೋಬಾ ಮೈದಾನದಲ್ಲಿ ನಾಳೆ ಮೋದಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin