ಮಣಿಪುರದಲ್ಲಿ ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತ ಬಿಜೆಪಿ

Spread the love

BJP--01

ಇಂಪಾಲ, ಮಾ.13- ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ಈಶಾನ್ಯ ರಾಜ್ಯ ಮಣಿಪುರದಲ್ಲೂ ಸರ್ಕಾರ ರಚನೆಗೆ ಬಿಜೆಪಿ ತಂತ್ರ ರೂಪಿಸಿದ್ದು , ಅನ್ಯ ಪಕ್ಷಗಳ 10 ಮಂದಿ ಶಾಸಕರು ಈಗಾಗಲೇ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಈ ಮಧ್ಯೆ ಹೊಸ ಸರ್ಕಾರ ರಚನೆಗೆ ಅನುವು ಮಾಡಿಕೊಡಲು ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಇಬೋಬಿ ಒಕ್ರಾಮ್ ಸಿಂಗ್ ಅವರಿಗೆ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಸೂಚನೆ ನೀಡಿದ್ದಾರೆ.   ಅಲ್ಲದೆ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಈವರೆಗೆ ಯಾವುದೇ ಪಕ್ಷಗಳಿಗೆ ಅಧಿಕೃತ ಆಹ್ವಾನ ನೀಡಿಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.

60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸ್ಥಾನಗಳು ಬೇಕಿದ್ದು , ಕಾಂಗ್ರೆಸ್ 28 ಹಾಗೂ ಬಿಜೆಪಿ 21 ಸ್ಥಾನ ಹೊಂದಿವೆ. 4 ಶಾಸಕರಿರುವ ನಾಗಾ ಪೀಪಲ್ ಪಾರ್ಟಿ(ಎನ್‍ಪಿಪಿ), 4 ಸದಸ್ಯರ ನಾಗಾ ಪೀಪಲ್ಸ್ ಫ್ರಂಟ್(ಎನ್‍ಪಿಎಫ್), ಓರ್ವ ಎಲ್‍ಜೆಪಿ, ಓರ್ವ ತೃಣಮೂಲ ಕಾಂಗ್ರೆಸ್ ಶಾಸಕರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ಬಿಜೆಪಿಗೆ ಬಹುಮತ ಲಭಿಸಿದೆ. ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನ ಆಯ್ಕೆಯಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin