ಮಣಿಪುರದ 28 ಮತ ಕೇಂದ್ರಗಳಲ್ಲಿ ಶಾಂತಿಯುತ ಮರು ಮತದಾನ

Spread the love

Manipur-Voting--1

ಇಂಫಾಲ್, ಮಾ.10-ಈಶಾನ್ಯ ರಾಜ್ಯ ಮಣಿಪುರದ ನಾಲ್ಕು ಜಿಲ್ಲೆಗಳ 28 ಮತಗಟ್ಟೆಗಳಲ್ಲಿ ಇಂದು ಭಾರೀ ಬಿಗಿ ಭದ್ರತೆ ನಡುವೆ ವಿಧಾನಸಭೆ ಚುನಾವಣೆಗೆ ಮರು ಮತದಾನವಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಚುನಾವಣಾ ಶಾಂತಿಯುತವಾಗಿ ನಡೆಯಿತು ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ಸಾಹಿ ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದಿತು.

ಉಕುಲ್, ತೆಂಗ್‍ನೌಪಾಲ್, ಕಂಗ್‍ಪೋಪಿ ಮತ್ತು ಸೇನಾಪತಿ ಜಿಲ್ಲೆಗಳಲ್ಲಿ ಮಾ.8ಎಂದು ನಡೆದ ಮೊದಲ ಹಂತದ ಮತದಾನದ ವೇಳೆ 28 ಮತಗಟ್ಟೆಗಳಲ್ಲಿ ಚುನಾವಣಾ ಅಕ್ರಮಗಳು ನಡೆದು ಮರು ಮತದಾನಕ್ಕೆ ಆದೇಶ ನೀಡಲಾಗಿತ್ತು. ಮಣಿಪುರದ ಮೂರು ಜಿಲ್ಲೆಗಳ 34 ಮತ ಕೇಂದ್ರಗಳಲ್ಲಿ ನಿನ್ನೆ ಭಾರೀ ಬಿಗಿ ಭದ್ರತೆ ನಡುವೆ ವಿಧಾನಸಭೆ ಚುನಾವಣೆಗೆ ಮರು ಮತದಾನವಾಗಿತ್ತು. ಇಂಫಾಲ, ಚುರಾಚಾಂದ್‍ಪುರ್ ಮತ್ತು ಕಾಂಗ್‍ಪೋಕಿ ಜಿಲ್ಲೆಗಳಲ್ಲಿ ಮಾ.4ರಂದು ನಡೆದ ಮೊದಲ ಹಂತದ ಮತದಾನದ ವೇಳೆ 34 ಮತ ಕೇಂದ್ರಗಳಲ್ಲಿ ಚುನಾವಣಾ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಮರು ಮತದಾನಕ್ಕೆ ಆದೇಶಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin