ಮಣಿಪುರ ಮುಖ್ಯಮಂತ್ರಿ ಮೇಲೆ ಫೈರಿಂಗ್ : ಪ್ರಾಣಾಪಾಯದಿಂದ ಓಕ್ರಂ ಇಬೋಬಿ ಸಿಂಗ್ ಪಾರು

Spread the love

Manipur-CM

ಇಂಫಾಲ್ ಅ.24 : ಮಣಿಪುರ ಮುಖ್ಯಮಂತ್ರಿ ಓಕ್ರಂ ಇಬೋಬಿ ಸಿಂಗ್ ಅವರ ಮೇಲೆ ಶಂಕಿತ ಎನ್ ಎಸ್ ಸಿಎನ್(ಐಎಂ) ಬಂಡುಕೋರರು ನಡೆಸಿದ ಗುಂಡಿನ ದಾಳಿ ನಡೆಸಿದ್ದು,ಕೂದಲೆಳೆ ಅಂತರದಲ್ಲಿ ಸಿಂಗ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಇಬೋಬಿ ಸಿಂಗ್ ಹಾಗೂ ಉಪಮುಖ್ಯಮಂತ್ರಿ ಇಂಫಾಲ್ ನಿಂದ ಹೆಲಿಕಾಪ್ಟರ್ ನಲ್ಲಿ ಇಂದು ಬೆಳಗ್ಗೆ ಉಕ್ರುಲ್ ಹೆಲಿಪ್ಯಾಡ್ ಗೆ ಬಂದಿಳಿದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಸಿಎಂ ಅವರು ಆಸ್ಪತ್ರೆ ಹಾಗೂ ಇತರ ಕಟ್ಟಡಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರು.

ಹೆಲಿಪ್ಯಾಡ್ ನಲ್ಲಿ ಬಂದಿಳಿದ ಕೂಡಲೇ ಅಪರಿಚಿತ ಶಸ್ತ್ರಾಸ್ತ್ರಧಾರಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆಕಸ್ಮಿಕ ನಡೆದ ಘಟನೆಯಲ್ಲಿ ಇಬ್ಬರು ಮಣಿಪುರ್ ರೈಫಲ್ಸ್ ಯೋಧರು ಗಾಯಗೊಂಡಿದ್ದಾರೆ.

► Follow us on –  Facebook / Twitter  / Google+

Sri Raghav

Admin