ಮಣಿಪುರ ಸಿಎಂ ಪುತ್ರ ಗುಂಡು ಹಾರಿಸಿ ಯುವಕನನ್ನು ಕೊಂದ ಪ್ರಕರಣಕ್ಕೆ ಮರುಜೀವ

supreme-ocurt
ನವದೆಹಲಿ, ಮೇ 22-ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಪುತ್ರ ಯುವಕನೊಬ್ಬನ ಮೇಲೆ ಗುಂಡು ಹಾರಿಸಿ ಕೊಲೆಗೈದ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಹತನಾದ ಯುವಕನ ಪೋಷಕರು ಸಲ್ಲಿಸಿರುವ ಮನವಿ ಮೇರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಇಂದು ನೋಟಿಸ್‍ಗಳನ್ನು ಜಾರಿಗೊಳಿಸಿರುವ ಸುಪ್ರೀಂಕೋರ್ಟ್ ಪ್ರತ್ಯುತ್ತರ ನೀಡುವಂತೆ ಸೂಚಿಸಿದೆ.   ತಮ್ಮ ಪುತ್ರ ಕೊಲೆಯಾದ ನಂತರ ಈ ಪ್ರಕರಣದಲ್ಲಿ ತಾವು ಕೋರ್ಟ್ ಮೆಟ್ಟಿಲೆರಿರುವುದರಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿ ರಕ್ಷಣೆಗೆ ಮನವಿ ಮಾಡಿದ್ದರು. ಮೃತ ಯುವಕ ಇರೋಮ್ ರೋಜರ್ ಅವರ ತಾಯಿ ಚೈತ್ರಾ ದೇವಿ ಮನವಿಗೆ ಕೋರ್ಟ್ ಸ್ಪಂದಿಸಿದೆ.ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ನವೀನ್ ಸಿನ್ಹಾ ಅವರನ್ನು ಒಳಗೊಂಡ ರಜೆ ಕಾಲದ ಪೀಠವು ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಮಣಿಪುರದ ಮುಖ್ಯ ಕಾರ್ಯದರ್ಶಿ ಅವರಿಗೆ ನೋಟಿಸ್ ಜÁರಿಗೊಳಿಸಿ ಮೇ 29ರ ವೇಳೆ ಪ್ರತ್ಯುತ್ತರ ನೀಡುವಂತೆ ಸೂಚಿಸಿದೆ. ಹಾಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಪುತ್ರ ಅಜಯ್ ಮೀತೈ ಮಾರ್ಚ್ 20, 2011ರಂದು ಹೆದ್ದಾರಿಯಲ್ಲಿ ತನ್ನ ಕಾರನ್ನು ಹಿಂದಿಕ್ಕಿದ ರೋಜರ್ ಜೊತೆ ಜಗಳ ತೆಗೆದು ಗುಂಡು ಹಾರಿಸಿ ಕೊಂದಿದ್ದನು. ಈ ಪ್ರಕರಣದಲ್ಲಿ ನ್ಯಾಯಾಲಯವೊಂದು ಅಜಯ್‍ಗೆ ಐದು ವರ್ಷಗಳ ಶಿಕ್ಷೆ ವಿಧಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin