ಮತಗಟ್ಟೆಯೊಳಗೆ ಗನ್ ತೆಗೆದುಕೊಂಡು ಹೋದ ಮುಖಂಡನ ಬಂಧನ

Sangeet-Som--01

ಮೀರತ್, ಫೆ.11-ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಮತದಾನದ ವೇಳೆ ಪಿಸ್ತೂಲ್‍ನೊಂದಿಗೆ ಮತಗಟ್ಟೆ ಪ್ರವೇಶಿಸಿದ ವಿವಾದಿತ ಬಿಜೆಪಿ ನಾಯಕ ಸಂಗೀತ್ ಸೋಮ್‍ರ ಸಹೋದರ ಗಗನ್ ಸೋಮ್‍ರನ್ನು ಪೊಲೀಸರು ಬಂಧಿಸಿದ್ದಾರೆ.   ಮೀರತ್‍ನ ಸರ್ಧಾನಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಇಂದು ಬೆಳಗ್ಗೆ 9 ಗಂಟೆಗೆ ಬಂದ ಅವರನ್ನು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಅವರ ಬಳಿ ಪಿಸ್ತೂಲ್ ಇತ್ತು. ತಕ್ಷಣ ಪೊಲೀಸರು ಅವರನ್ನು ಬಂಧಿಸಿದರು. ಚುನಾವಣೆ ನೀತಿ ಸಂಹಿತೆಯಂತೆ ಮತಗಟ್ಟೆ ಬಳಿ ಯಾವುದೇ ಶಸ್ತ್ರಾಸ್ತ್ರಗಳನ್ನು ಒಯ್ಯುವಂತಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin