ಮತ್ತಿನಲ್ಲಿ ಕಾನ್‍ಸ್ಟೇಬಲ್ ಸೇರಿದಂತೆ ಮೂವರಿಗೆ ಇರಿದ ಯುವಕ

Murder--01

ಬೆಂಗಳೂರು, ಮೇ 28– ಮಾದಕ ದ್ರವ್ಯ ಸೇವಿಸಿದ ಯುವಕನೊಬ್ಬ ಮತ್ತಿನಲ್ಲಿ ಕಾನ್‍ಸ್ಟೇಬಲ್ ಸೇರಿದಂತೆ ಮೂವರಿಗೆ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ ನಡೆದಿದೆ. ಮುಬಾರಕ್(25) ಮತ್ತಿನಲ್ಲಿ ಗಾಯಗೊಳಿಸಿರುವ ಯುವಕ. ನಿನ್ನೆ ರಾತ್ರಿ ಈತ ಮಾದಕ ದ್ರವ್ಯ ಸೇವಿಸಿದ್ದಾನೆ. ಮತ್ತಿನಲ್ಲಿ ತೂರಾಡುತ್ತಾ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಕಡೆ ಬಂದಿದ್ದಾನೆ. ಈ ವೇಳೆ ಅಲ್ಲಿದ್ದವರು ಈತನನ್ನು ವಿಚಾರಿಸಿದ್ದಾರೆ. ಕುಪಿತಗೊಂಡ ಈತ ಬಸ್‍ಗೆ ಕಾಯುತ್ತಿದ್ದ ಟಮಕನಿವಾಸಿ ಶ್ರೀನಿವಾಸ್, ವೆಂಕಟೇಶಪ್ಪ ಎಂಬುವರಿಗೆ ಇರಿದಿದ್ದಾನೆ. ಸುತ್ತಲಿದ್ದ ಜನ ಈತನನ್ನು ಹಿಡಯಲು ಬಂದಾಗ ಅವರನ್ನು ಬೆದರಿಸಿ ಓಡಿದ್ದಾನೆ.ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಕಾನ್‍ಸ್ಟೇಬಲ್ ವಿಜಯಣ್ಣ ಮುಬಾರಕ್‍ನನ್ನು ಹಿಡಿಯಲು ಹೋದಾಗ ಅವರಿಗೂ ಚಾಕುವಿನಿಂದ ಚುಚ್ಚಿದ್ದಾನೆ. ಆದರೂ ಕಾನ್‍ಸ್ಟೇಬಲ್ ಈತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಇಬ್ಬರು ಪ್ರಯಾಣಿಕರು ಹಾಗೂ ಮುಬಾರಕ್‍ನನ್ನು ಪೊಲೀಸರು ಎಸ್‍ಎನ್‍ಆರ್  ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಜಯಣ್ಣ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin