ಮತ್ತೆ ಚಿನ್ನದ ಬೆಲೆ ಏರಿಕೆ
ಮುಂಬೈ, ಅ.14– ಚಿನ್ನದ ಬೆಲೆ ಏರುಗತಿಯಲ್ಲೆ ಸಾಗುತ್ತಿದೆ. ಇತ್ತೀಚೆಗಷ್ಟೇ ಸ್ವಲ್ಪ ಕಡಿಮೆಯಾಗಿ ಗ್ರಾಹಕರಲ್ಲಿ ಭರವಸೆ ಮೂಡಿಸಿದ್ದ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಆಯುಧ ಪೂಜೆ, ವಿಜಯದಶಮಿ, ಮೊಹರಂ ಅಂಗವಾಗಿ ಸಾಲು, ಸಾಲು ರಜೆ ಬಂದ ಕಾರಣ, ವಹಿವಾಟು ಸರಿಯಾಗಿ ನಡೆದಿರಲಿಲ್ಲ. ಗುರುವಾರ ಗ್ರಾಹಕರು ಮತ್ತು ಚಿನ್ನಾಭರಣ ವರ್ತಕರು ಖರೀದಿಗೆ ಮುಗಿಬಿದ್ದಿದ್ದರಿಂದ, ಬೆಲೆ ಹೆಚ್ಚಳವಾಗಿದೆ. ರಾತ್ರಿ 10 ಗ್ರಾಂ ಚಿನ್ನದ ಬೆಲೆ 85 ರೂ. ಏರಿಕೆಯಾಗಿದೆ. ಸೋಮವಾರ 10 ಗ್ರಾಂ ಸ್ಟಾಂಡರ್ಡ್ ಚಿನ್ನದ ಬೆಲೆ 29,875 ರೂ.ನಿಂದ 29,960 ರೂ.ಗೆ ತಲುಪಿತ್ತು. ಅದೇ ರೀತಿಯಲ್ಲಿ 10 ಗ್ರಾಂ ಅಪರಂಜಿ ಚಿನ್ನದ ದರ 30,025 ರೂ.ನಿಂದ 30,110 ರೂಪಾಯಿಗೆ ಏರಿಕೆಯಾಗಿದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದಂತೆ ಬೆಲೆಯೂ ಏರಿಕೆಯಾಗಲಿದೆ.