ಮತ ಯಾಚಿಸಲು ಬೆಂಗಳೂರಿಗೆ ಬರುತ್ತಿದ್ದಾರೆ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್

Spread the love

Kovind

ನವದೆಹಲಿ,ಜು.4- ಎನ್‍ಡಿಎ ಮೈತ್ರಿ ಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ಮತ ಯಾಚನೆಗಾಗಿ ನಾಳೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  ವಿಶೇಷ ವಿಮಾನದ ಮೂಲಕ ಬುಧವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು. ಅನಂತರ ಮಧ್ಯಾಹ್ನ 12 ಗಂಟೆಗೆ ಖಾಸಗಿ ಹೋಟೆಲ್‍ನಲ್ಲಿ ಏರ್ಪಡಿಸಿರುವ ಸಭೆಯಲ್ಲಿ ಭಾಗವಹಿಸುವರು.  ಈ ಸಭೆಯಲ್ಲಿ ಬಿಜೆಪಿಯ ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಭಾಗವಹಸಲಿದ್ದು, ಕೋವಿಂದ್ ಅವರು ಔಪಚಾರಿಕವಾಗಿ ಮತಯಾಚಿಸುವರು.

ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ಮೀರಾಕುಮಾರ್ ಅವರು ಕಣಕ್ಕಿಳಿದಿದ್ದು, ಜೆಡಿಎಸ್ ಕೂಡ ಮೀರಾಕುಮಾರ್ ಅವರನ್ನೇ ಬೆಂಬಲಿಸಿದೆ. ಹೀಗಾಗಿ ಈ ಪಕ್ಷಗಳ ಜನಪ್ರತಿನಿಧಿಗಳನ್ನು ಕೋವಿಂದ್ ಅವರು ಭೇಟಿ ಮಾಡುತ್ತಾರೋ, ಇಲ್ಲವೋ ಎಂಬುದು ನಿರ್ಧಾರವಾಗಿಲ್ಲ.   ಆದರೆ ಇವೆರಡು ಪಕ್ಷಗಳ ಹೊರತಾಗಿ ಇತರ ವಿರೋಧ ಪಕ್ಷಗಳ ಸಂಸದರು-ಶಾಸಕರನ್ನೂ ನಾಳಿನ ಸಭೆಗೆ ಪಚಾರಿಕವಾಗಿ ಆಹ್ವಾನಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin