ಮದುವೆ ಮನೆಯಲ್ಲಿ ಜವರಾಯನಾದ ಜನರೇಟರ್, 4 ಅಮಾಯಕ ಜೀವಗಳಿಗೆ ‘ಹೊಗೆ’

4-Killed-Sindanuru-Raichur

ರಾಯಚೂರು, ಮಾ.17- ಮದುವೆ ಮನೆಯಲ್ಲಿ ವಿದ್ಯುತ್ ಇಲ್ಲದ ಕಾರಣ ತರಿಸಲಾಗಿದ್ದ ಜನರೇಟರ್‍ಅನ್ನು ಚಾಲುಗೊಳಿಸಿ ಕೋಣೆಯಲ್ಲಿ ಮಲಗಿದ್ದ ನಾಲ್ವರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ. ನಿನ್ನೆ ಪಟ್ಟಣದ ನಿವಾಸಿಯೊಬ್ಬರ ವಿವಾಹ ಇಲ್ಲಿನ ಸಮುದಾಯ ಭವನದಲ್ಲಿ ನಡೆದಿದ್ದು, ವಿದ್ಯುತ್ ಇಲ್ಲದ ಕಾರಣ ಬಾಗಲಕೋಟೆಯಿಂದ ಜನರೇಟರ್ ತಂದು ಸಮೀಪದಲ್ಲೇ ಇರುವ ಕೊಠಡಿಯೊಂದರಲ್ಲಿ ಇರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.

Sindanuru-Raichur-4

ತಡರಾತ್ರಿವರೆಗೂ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಂಜುನಾಥ, ಶಿವಕುಮಾರ್, ಮಹಾಂತಪ್ಪ ಯಕರನಾಳ, ಮೌಲಾಲಿ ಬುಡೇಸಾಬ್, ಗದ್ದಪ್ಪ ಎಂಬುವರು ಅಲ್ಲಿ ಮಲಗಿದ್ದರು.   ಬೆಳಗ್ಗೆ ಸಮುದಾಯ ಭವನದ ಸಿಬ್ಬಂದಿಯೊಬ್ಬರು ಕೋಣೆ ತೆರೆದಾಗ ದಟ್ಟ ಹೊಗೆ ಆವರಿಸಿತ್ತು. ಅದರಲ್ಲಿ ಮಲಗಿದ್ದ ಐವರನ್ನು ಎಬ್ಬಿಸಲು ಹೋದಾಗ ಯಾರೂ ಏಳಲಿಲ್ಲ. ಅನುಮಾನಗೊಂಡು ಕೆಲವರನ್ನು ಕರೆದು ಪರಿಶೀಲಿಸಿ ನಂತರ ಆಸ್ಪತ್ರೆಗೆ ಸಾಗಿಸಿದ್ದಾರೆ.

Sindanuru-Raichur-3

ಅಲ್ಲಿ ಇವರೆಲ್ಲರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇವರ ಜತೆಯಲ್ಲಿ ಮಲಗಿದ್ದ ಸುರೇಶ್ ಗದ್ದಪ್ಪ ಎಂಬಾತ ಕೂಡ ಅಸ್ವಸ್ಥಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಗಿದೆ. ಆತನ ಸ್ಥಿತಿಯೂ ಕೂಡ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಡೀಸೆಲ್ ಜನರೇಟರ್ ಉಗುಳುವ ಕಾರ್ಬೊಹೈಡ್ರೇಡ್ ಹೊಗೆ ಸೇವಿಸಿ ಉಸಿರುಗಟ್ಟಿ ಇವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಮೃತರು ಶಾಮಿಯಾನ ಹಾಕುವ ಟೆಂಟ್‍ಹೌಸ್‍ನ ನೌಕರರು ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sindanuru-Raichur

Sri Raghav

Admin