ಮಧುಮೇಹಕ್ಕೆ ಸಿರಿಧಾನ್ಯಗಳೇ ರಾಮಬಾಣ

Spread the love

Siri-dany---014

ಬೆಂಗಳೂರು, ಏ.12- ದೀರ್ಘ ಕಾಲದ ಕಾಯಿಲೆ ಎಂದೇ ಹೆಸರಾಗಿರುವ ಸಕ್ಕರೆ ಕಾಯಿಲೆ ಅಥವಾ ಮಧುಮೇಹಕ್ಕೆ ಹಲವು ವರ್ಷಗಳಿಂದ ಸಿರಿಧಾನ್ಯಗಳೇ ರಾಮಬಾಣವಾಗಿದೆ ಎಂಬುದು ದೃಢಪಟ್ಟಿದೆ. ಇದೊಂದೇ ಅಲ್ಲದೆ, ಹಲವು ವಿಧದ ಸಿರಿ ಧಾನ್ಯಗಳ ಸೇವನೆಯಿಂದ ದೇಹದಲ್ಲಿ ಪೌಷ್ಠಿಕಾಂಶ ಅಂಶಗಳು ಹೆಚ್ಚುವುದರ ಜತೆಗೆ ಆರೋಗ್ಯಕರ ಪ್ರಯೋಜನಗಳು ಲಭಿಸಲಿದ್ದು, ಇವುಗಳಿಗೆ ಬೇಡಿಕೆಗಳೂ ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಸಿರಿಧಾನ್ಯಗಳ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದಕ್ಕಾಗಿ ಇದೇ ಏ.28ರಿಂದ 30ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಹಮ್ಮಿಕೊಂಡಿದೆ.

ಈ ಮೂಲಕ ಸಾವಯವ ಮತ್ತು ಸಿರಿಧಾನ್ಯಗಳ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಲ್ಲದೆ, ರೈತ ಒಕ್ಕೂಟಗಳಿಗೆ ರಾಷ್ಟ್ರೀಯ ವೇದಿಕೆ ಒದಗಿಸಲಾಗುವುದು. ಜತೆಗೆ ಚಿಲ್ಲರೆ ವ್ಯಾಪಾರಿಗಳಿಗೆ, ದೊಡ್ಡ ವ್ಯಾಪಾರಿಗಳಿಗೆ ಮತ್ತು ರಫ್ತುದಾರರ ಜತೆಗೆ ನೇರ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ. ಈಗಾಗಲೇ ಸಂಸ್ಕರಿಸಿದ ಸಿರಿಧಾನ್ಯಗಳಲ್ಲಿ ಯಾವುದೇ ರೀತಿಯ ಜೊಳ್ಳು ಇಲ್ಲವೇ ಹೊಟ್ಟು ಹಾಗೂ ಸೂಕ್ಷ್ಮಾಣುಗಳು ಇರುವುದಿಲ್ಲ. ಈ ಆಹಾರ ಪದಾರ್ಥಗಳ ಸೇವನೆಯಿಂದ ದೇಹದ ರಕ್ತಕಣದಲ್ಲಿ ಸಕ್ಕರೆ/ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದಕ್ಕೆ ಪ್ರತಿಯಾಗಿ ಮನುಷ್ಯನ ದೇಹವು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಇನ್ಸುಲಿನ್ ಅನ್ನು ಹೆಚ್ಚು ಹೆಚ್ಚು ಉತ್ಪಾದಿಸುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಮಧುಮೇಹದ ವಿರುದ್ಧ ಕಾರ್ಯಾಚರಣೆ ನಡೆಸಲಿದೆ.

ಈ ಸಿರಿಧಾನ್ಯಗಳ ಸೇವನೆಯಿಂದ ದೇಹಕ್ಕೆ ಕಡಿಮೆ ಪ್ರಮಾಣದ ಗ್ಲೂಕೋಸ್ ಬಿಡುಗಡೆ ಮಾಡುತ್ತದೆ. ಮತ್ತೆ ಕೆಲವು ಬಾರಿ ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಸಿರಿಧಾನ್ಯಗಳ ಸೇವನೆಯಿಂದ ದೇಹಕ್ಕೆ ನಾರು ಹಾಗೂ ಪ್ರೋಟೀನ್ ಅಂಶಗಳು ಲಭ್ಯವಾಗುತ್ತವೆ. ನ್ಯೂಟ್ರಿಷಿಯನಿಸ್ಟ್ (ಪೋಷಣ ತಜ್ಞ) ಗಳು ಹೇಳುವ ಪ್ರಕಾರ, ಸಿರಿಧಾನ್ಯಗಳಲ್ಲಿ ಕಬ್ಬಿಣ, ತಾಮ್ರ, ಮ್ಯಾಂಗನೀಸ, ಕ್ಯಾಲ್ಸಿಯಂ, ರಂಜಕ, ಮೆಗ್ನೀಶಿಯಂ ಮತ್ತು ವಿಟಮಿನ್ ಬಿ, ವಿಟಮಿನ್ ಇ ಅಂಶಗಳು ಅಧಿಕವಾಗಿರುತ್ತವೆ. ಅಲ್ಲದೆ, ಅಮಿನೋ ಆಮ್ಲದ ಕೆಲವು ಅಂಶಗಳು, ಜಿಂಕ, ಪೋಟಾಷಿಯಂ,ಪೋಲಿಕ್ ಆಮ್ಲ, ಮತ್ತು ಟ್ರಿಪ್ರೋಫಾನ್ ಅಂಶಗಳು ಇರುತ್ತವೆ. ಸಿರಿಧಾನ್ಯಗಳನ್ನು ಅತ್ಯುತ್ತಮ ಆಹಾರ ಎಂದೇ ಪರಿಗಣಿಸಲಾಗಿದೆ. ಇದನ್ನು ಸೇವಿಸುವುದರಿಂದ ಮಧುಮೇಹ ಕಾಯಿಲೆ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು.

ಇದರಲ್ಲಿರುವ ಹೆಚ್ಚಿನ ನಾರಿನ ಅಂಶಗಳು ಹಸಿವನ್ನು ಇಂಗಿಸುವುದಲ್ಲದೆ, ಬೊಜ್ಜು ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಜತೆಗೆ ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ. ಪೌಷ್ಟಿಕಾಂಶಗಳ ಆಗರವಾಗಿರುವುದರಿಂದ ರಕ್ತಹೀನತೆ, ಯಕೃತ್ ಸಮಸ್ಯೆಗಳು, ಅಸ್ತಮಾ, ಪಿತ್ತಗಲ್ಲು, ಹೊಟ್ಟೆ ಹುಣ್ಣು ಹಾಗೂ ಮಲಬದ್ಧತೆ ಸಮಸ್ಯೆಗಳ ತಡೆಯಲು ಮುಖ್ಯ ಪಾತ್ರ ವಹಿಸುತ್ತವೆ.  ಅಲರ್ಜಿಯ ಪ್ರತಿಕೂಲ ಪರಿಣಾಮವನ್ನೂ ತಡೆಗಟ್ಟಬಹುದಾಗಿದೆ. ಉತ್ಕರ್ಷಣ ನಿರೋಧಕ ಅಂಶಗಳು ಹೆಚ್ಚಿರುವುದರಿಂದ ಉತ್ಕರ್ಷಣ ಒತ್ತಡಗಳ ಕಡಿಮೆ ಮಾಡುವುದಲ್ಲದೆ ಕ್ಯಾನ್ಸರ್ ರೋಗ ಬರುವ ಸಾಧ್ಯತೆಯನ್ನು ತಗ್ಗಿಸುತ್ತದೆ. ಕೊನೆಯದಾಗಿ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೆಚ್ಚಿನ ಮಾಹಿತಿಗೆ ತೇಜಸ್ವಿ-9742023272.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin