ಮಧುಮೇಹದ ಬಗ್ಗೆ ಇರಲಿ ಎಚ್ಚರ..!

Diabetes-101

ನಮ್ಮ ಪೂರ್ವಿಕರು ದಿನಪೂರ್ತಿ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ದಿನಗಳು, ನಮ್ಮ ಅಜ್ಜಿಯರು ಮನೆಯ ಎಲ್ಲ ಕೆಲಸಗಳೊಂದಿಗೆ, ಮಕ್ಕಳನ್ನು ಸಂಭಾಳಿಸುತ್ತಿದ್ದ ದಿನಗಳು ಹೋದವು. ಮಾಲಿನ್ಯಮುಕ್ತವಾದ ಪರಿಸರದಲ್ಲಿ ಮಕ್ಕಳು ಆಟವಾಡಲು ಹೋದಾಗ, ಮಕ್ಕಳನ್ನು ಮನೆಗೆ ಮರಳಿ ಕರೆತರಲು ತಾಯಿ ಕೋಲು ಹಿಡಿದು ಹೋಗಿ ಕರೆತಂದು, ಹೋಂವರ್ಕ್ ಮಾಡಲು ಕೂರಿಸುತ್ತಿದ್ದ ದಿನಗಳು ಹೋದವು. ಈಗ ಇಡೀ ಕುಟುಂಬ ಸತತ ದುಡಿಮೆಯ ನಂತರ ಮನೆಯಲ್ಲಿ ಮಾಡಿದ ಉತ್ತಮ ಊಟ ಸವಿಯುವ, ಅಂದರೆ ಇತ್ತೀಚಿನ ನಿತ್ಯದ ಫಾಸ್ಟ್ ಫುಡ್ ಹೊರತಾದ ತಿಂಡಿ ತಿಂದು ತಮ್ಮ ಆರೋಗ್ಯಕರ ಜೀವನಶೈಲಿಯನ್ನು ಕಾಯ್ದುಕೊಳ್ಳುತ್ತಿದ್ದರು. ಬಿಡುವಿಲ್ಲದ ಜೀವನಶೈಲಿ, ತಾಂತ್ರಿಕ ಪ್ರಗತಿಯ, ಒತ್ತಡಯುಕ್ತ ಕಾರ್ಯಸ್ಥಳ ಈ ಎಲ್ಲವೂ ಮನಸ್ಸು ಹಾಗೂ ದೇಹದ ಮೇಲೆ ಪರಿಣಾಮ ಬೀರುತ್ತಿವೆ. ಮಧುಮೇಹ (ಸಕ್ಕರೆಕಾಯಿಲೆ), ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗಳು ಈಗ ಪ್ರತಿಯೊಂದು ಮನೆಯಲ್ಲಿಯೂ ಕಾಣಸಿಗುವ ಸಾಮಾನ್ಯ ರೋಗವಾಗಿದೆ.

ಸಾಮಾನ್ಯ ರಕ್ತದೊತ್ತಡವನ್ನು, ಸಾಮಾನ್ಯವಾಗಿ 120/180 ಎಂ.ಎಂ ಎಚ್‍ಜಿ ಮೀರಬಾರದು ಎಂದು ಹೇಳಲಾಗುತ್ತದೆ. 140/90 ಅಥವಾ ಅದಕ್ಕೂ ಹೆಚ್ಚಿನ ರಕ್ತದೊತ್ತಡ ಅಥವಾ ಅದರ ಆಸುಪಾಸಿನಲ್ಲಿ ಇರುವುದನ್ನು ಪ್ರೀ ಹೈಪರ್‍ಟೆನ್ಷನ್ ಎಂದು ಹೇಳಲಾಗುತ್ತದೆ. ಇದು, ಯಾವುದೇ ಧೃಡ ಸೂಚನೆಯನ್ನು ನೀಡುವುದಿಲ್ಲ. ಅಧಿಕ ರಕ್ತದೊತ್ತಡವು ಅನೇಕ ಅನಾರೋಗ್ಯ ಸಮಸ್ಯೆಗಳನ್ನು ತರಲಿದೆ. ಇದರಲ್ಲಿ ಹೃದ್ರೋಗ, ಮಿದುಳು, ಕಿಡ್ನಿ, ಆರ್ಟಿರಿಸ್, ಕಣ್ಣು ಸಮಸ್ಯೆಗಳು ಕೂಡಾ ಸೇರಿವೆ. ಅಧಿಕ ರಕ್ತದೊತ್ತಡದ ಪರಿಣಾಮದಿಂದ ರೆಟಿನಾಗೆ ಆಗುವ ಸಮಸ್ಯೆಗೆ ರೆಟಿನೋಪತಿ ಎಂದು ಹೇಳಲಾಗುತ್ತದೆ. ರೆಟಿನಾ ಅಥವಾ ಅಕ್ಷಿಪಟಲ ಎಂಬುದು ಕಣ್ಣಿನ ಹಿಂಭಾಗ ಇರುವ ತೆಳುವಾದ ಪದರವಾಗಿದ್ದು, ಇದು, ಕ್ಯಾಮೆರಾದಲ್ಲಿ ಇರುವ ಫಿಲ್ಮ್‍ನ ಸ್ವರೂಪದಲ್ಲಿ ಕಾರ್ಯ ನಿರ್ವಹಿಸಲಿದೆ. ಇದು, ವ್ಯಕ್ತಿಯ ದೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಹೈಪರ್‍ಟೆನ್ಸಿವ್ ರೆಟಿನೊಪಥಿಗೆ ಕಾರಣಗಳೇನು?
ನಿಮಗೆ ಅಧಿಕರಕ್ತದೊತ್ತಡ ಇದ್ದಲ್ಲಿ, ಅದು ರೆಟಿನಾಗೆ ರಕ್ತ ಪೂರೈಸುವ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಇದಕ್ಕೆ ಧಕ್ಕೆಯಾದರೆ ದೃಷ್ಟಿಯಲ್ಲಿ ಸ್ಪಷ್ಟತೆ ಇರುವುದಿಲ್ಲ. ಅಧಿಕ ರಕ್ತದೊತ್ತಡ ಇದ್ದಷ್ಟು ಸಮಸ್ಯೆ ಹೆಚ್ಚಲಿದೆ. ಇತರೆ ಅಂಶಗಳಲ್ಲಿ ಡಯಾಬಿಟಿಸ್ ಸೇರಿದಂತೆ ರೆಟಿನೋಪತಿ ಮೇಲೂ ಪರಿಣಾಮ ಬೀರಲಿದೆ. ಈ ಎಲ್ಲವೂ ಸಮಸ್ಯೆಯನ್ನು ಹೆಚ್ಚಿಸಲಿದ್ದು, ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು.

ಚಿಕಿತ್ಸೆ:
ಹೈಪರ್‍ಟೆನ್ಸಿವ್ ರೆಟಿನೊಪಥಿ ಚಿಕಿತ್ಸೆಗೆ ಏಕೈಕ ಮಾರ್ಗವೆಂದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು, ಅದು ಇನ್ನಷ್ಟು ಹೆಚ್ಚದಂತೆ ಕ್ರಮವಹಿಸುವುದು. ಜೀವನಶೈಲಿಯಲ್ಲಿನ ಬದಲಾವಣೆ, ಸಮರ್ಪಕ ಪಥ್ಯ ಹಾಗೂ ಸೂಕ್ತ ಔಷಧ ಸೇವನೆಯಿಂದ ಇದನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಹೈಪರ್‍ಟೆನ್ಸಿವ್ ರೆಟಿನೊಪಥಿಯ ಸೂಚನೆಗಳು:
ದುರದೃಷ್ಟವಶಾತ್, ನೀವು ಹೈಪರ್‍ಟೆನ್ಸಿವ್ ರೆಟಿನೋಪತಿಯಿಂದ ಬಳಲುತ್ತಿದ್ದರೂ ಅದು ಗಮನಕ್ಕೆ ಬಾರದಿರಬಹುದು. ಸೂಚನೆಗಳು ಏಕರೂಪದಲ್ಲಿ ಇರದೇ ಇರಬಹುದು. ಕೆಲವೊಂದು ಸೂಚನೆಗಳು ಹೀಗಿವೆ.
*ಸಾಮಾನ್ಯಕ್ಕಿಂತಲೂ ಕೆಲವೊಮ್ಮೆ ಎರಡು ಬಿಂಬಗಳು ಕಾಣಿಸುವುದು
* ತಲೆನೋವು
*ದೃಷ್ಟಿಗೆ ತೊಡಕು, ಏಕಾಏಕಿ ಕಣ್ಣು ಕಾಣಿಸದೇ ಇರಬಹುದು
ಹೈಪರ್‍ಟೆನ್ಸಿವ್ ರೆಟಿನೊಪಥಿ ಗುರುತಿಸುವಿಕೆ:
ನಿಮ್ಮ ನೇತ್ರ ತಜ್ಞರು ಆಫ್ತಾಲ್‍ಮೊಸ್ಕೊಪ್ ಹೆಸರಿನ ಪರಿಕರವನ್ನು ರಕ್ತನಾಳವನ್ನು ಪರಿಶೀಲಿಸಲು ಬಳಕೆ ಮಾಡುತ್ತಾರೆ ಅಥವಾ ರಕ್ತನಾಳದಲ್ಲಿ ಸೋರಿಕೆಯಾಗುತ್ತಿದೆಯಾ ಎಂಬುದನ್ನು ಗಮನಿಸುತ್ತಾರೆ. ಬಳಿಕ ಅವರು ಹಾನಿಯ ಪ್ರಮಾಣವನ್ನು ಗುರುತಿಸಲಿದ್ದು, ಹಾನಿ ಪ್ರಮಾಣ ಆಧರಿಸಿ ಹಂತವನ್ನು ನಿಗದಿಪಡಿಸಲಾಗುತ್ತದೆ.
ಕನಿಷ್ಠ ಹಂತದಲ್ಲಿ ಯಾವುದೇ ರೀತಿಯ ಸೂಚನೆ ಕಾಣಿಸದೇ ಇರಬಹುದು. ರಕ್ತನಾಳ ಬಾಗಿರುವುದು ಮೇಲ್ನೋಟಕ್ಕೆ ಕಂಡುಬರುವುದಿಲ್ಲ.
ಇಲ್ಲಿ ರಕ್ತನಾಳ ಬಾಗಿರುವುದನ್ನು ಗುರುತಿಸಬಹುದು. ಜೊತೆಗೆ ದೃಷ್ಟಿಯಲ್ಲಿ ಸಮಸ್ಯೆ ಇರುವುದು ಕಂಡುಬರುತ್ತದೆ.
ರಕ್ತನಾಳದಲ್ಲಿ ಅನೇಕ ಲೋಪ ಆಗಬಹುದು. ರಕ್ತನಾಳದಲ್ಲಿ ಸೋರಿಕೆ, ರೆಟಿನಾದಲ್ಲಿ ಊತ ಹೀಗೆ ಭಿನ್ನವಾಗಿರಬಹುದು.
ಈ ಹಂತದಲ್ಲಿ ಹೈಪರ್‍ಟೆನ್ಸಿವ್ ರೆಟಿನೋಪತಿಯಲ್ಲಿ ಅನೇಕ ಊತ ಕಂಡುಬರಲಿದೆ. ರೆಟಿನಾ ಕೇಂದ್ರ ಭಾಗ ಮಾಕುಲಾ ಎಂದು ಗುರುತಿಸುವುದು, ಇದರಿಂದ ದೃಷ್ಟಿ ಕಳೆದುಕೊಳ್ಳಬಹುದು.
ಹೈಪರ್‍ಟೆನ್ಷನ್ (ಅಧಿಕ ರಕ್ತದೊತ್ತಡ) ಎಂಬುದು ಪ್ರಮುಖ ಅಪಾಯಕಾರಿ ಅಂಶ ಇದು, ಇತರ ಸಂಭವನೀಯ ಅಂಧತ್ವಕ್ಕೆ ದಾರಿಮಾಡಿಕೊಡಲಿದೆ, ಉದಾಹರಣೆಗೆ ರೆಟಿನಾಲ್ ವೇನ್ ಅಕ್ಲೂಷನ್, ಮಿಕ್ಸಡ್ ರೆಟಿನೋಪತಿ ಮತ್ತು ಐಶ್ಚಾಮಿಕ್ ಆಪ್ಟಿಕ್ ನರರೋಗಗಳು.
ನಿಮ್ಮ ನೇತ್ರತಜ್ಞರು ಆಕುಲರ್ ಕೊಹೆರೆನ್ಸ್ ಟೊಮೊಗ್ರಫಿ (ಒಸಿಟಿ)ಯನ್ನು ತುಂಬಾ ಸೂಕ್ಷ್ಮ ಎನ್ನಲಾದ ರೆಟಿನಾದ ಮೇಲೆ ಊತದ ಪ್ರಮಾಣವನ್ನು ಗುರುತಿಸಲು ಇದನ್ನು ಬಳಸುತ್ತಾರೆ. ಮತ್ತು ಪ್ರೊರೊಸೆಂಟ್ ಡೈ ಮತ್ತು ವಿಶೇಷ ಕ್ಯಾಮೆರಾ (ಪ್ರೊರೆಸೀನ್ ಆಂಜಿಯೋಗ್ರಫಿ)ಯನ್ನು ರಕ್ತನಾಳಗಳಸ್ಥಿತಿ ಪರೀಕ್ಷಿಸಲು ಬಳಸಬಹುದು.

ಪರಿಣಾಮ:
ರಕ್ತದೊತ್ತಡ ನಿಯಂತ್ರಿಸಿದಲ್ಲಿ ರೆಟಿನಾ ಚೇತರಿಸಿಕೊಳ್ಳಲಿದೆ. ಆದರೆ, ಗ್ರೇಡ್ 4 ಹಂತದ ರೆಟಿನೋಪತಿ ಇದ್ದಲ್ಲಿ ಕಣ್ಣಿಗೆ ಸಂಬಂಧಿಸಿದ ನರಗಳ ಮೇಲೆ ಅಥವಾ ಮಾಕುಲಾ ಮೇಲೆ ಪರಿಣಾಮ ಬೀರಲಿದೆ. ಗ್ರೇಡ್ 4 ಹಂತದ ರೆಟಿನೋಪತಿಯಿಂದ ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಪಾಶ್ರ್ವವಾಯುವಿಗೆ ತುತ್ತಾಗುವ ದೊಡ್ಡ ಸಮಸ್ಯೆಯೂ ಇದೆ. ನೀವು ರಕ್ತದದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ದೃಷ್ಟಿದೋಷ ಮತ್ತು ತಲೆನೋವು ಇದ್ದಲ್ಲಿ ತಕ್ಷಣವೇ ವೈದ್ಯರ ಭೇಟಿ ಮಾಡುವುದು ಉತ್ತಮ.

ಮುಖ್ಯಾಂಶ:
ನೀವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಪರಿಸ್ತಿತಿ ಗಂಭೀರವಾಗಿದ್ದರೆ ನಿಮ್ಮ ದೈಹಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿ. ಅವರು ನಿಮಗೆ ರಕ್ತದೊತ್ತಡ ನಿಯಂತ್ರಿಸಲು ಸಲಹೆ ನೀಡಬಹುದು. ಇದರ ಜೊತೆಗೆ ಪರಿಣಾಮಕಾರಿ ಆಹಾರ ಪಥ್ಯ, ದೈಹಿಕ ವ್ಯಾಯಾಮ ಕೂಡಾ ಅಗತ್ಯ. ನೀವು ಅಧಿಕರಕ್ತದೊತ್ತಡದಿಂದ ಬಳಲುತ್ತಿದ್ದರೆ ಕೂಡಲೇ ನಿಮ್ಮ ನೇತ್ರ ತಜ್ಞರನ್ನು ಭೇಟಿಯಾಗುವುದು ಒಳಿತು.

Sri Raghav

Admin