ಮಧುರೈನಲ್ಲಿ ಜಲ್ಲಿಕಟ್ಟು : 950ಕ್ಕೂ ಹೆಚ್ಚು ಗೂಳಿಗಳು ಮತ್ತು 1,400 ಸ್ಪರ್ಧಿಗಳು ಭಾಗಿ

Jallikattu--01

ಮಧುರೈ, ಫೆ.10-ಭಾರತ ಹುಣ್ಣಿಮೆ ಪ್ರಯುಕ್ತ ತಮಿಳುನಾಡಿನ ಮದುರೈನ ಅಳಂಗಾನಲ್ಲೂರಿನಲ್ಲಿ ಇಂದು ನಡೆದ ಜಲ್ಲಿಕಟ್ಟು ಉತ್ಸವದ ವೇಳೆ ಅನೇಕರು ಗಾಯಗೊಂಡಿದ್ದಾರೆ. ತಮಿಳುನಾಡಿದ ಸಂಸ್ಕೃತಿಯ ಪ್ರತೀಕವಾದ ಜಲ್ಲಿಕಟ್ಟು ಕ್ರೀಡೆಯಲ್ಲಿ 950ಕ್ಕೂ ಹೆಚ್ಚು ಗೂಳಿಗಳು ಮತ್ತು 1,400 ಸ್ಪರ್ಧಿಗಳು ಭಾಗವಹಿಸಿದ್ದರು. ಉತ್ಸವ ಅಂಗವಾಗಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ಗೂಳಿ ಪಳಗಿಸುವ ಸ್ಫರ್ಧೆಯಲ್ಲಿ ಅತ್ಯುತ್ಸಾಹದಿಂದ ಜಲ್ಲಿಕಟ್ಟು ಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬೆದರಿದ ಹೋರಿಗಳನ್ನು ನಿಯಂತ್ರಿಸಲು ಯತ್ನಿಸಿದ ಅನೇಕರಿಗೆ ಗಾಯಗಳಾಗಿವೆ. ಸ್ಥಳದಲ್ಲಿದ್ದ ವೈದ್ಯಕೀಯ ತಂಡದಿಂದ ಚಿಕಿತ್ಸೆ ನೀಡಲಾಗಿದೆ.   ಕಳೆದ ವಾರ ಮದುರೈ ಜಿಲ್ಲೆಯ ಅಯನಪುರಂನಲ್ಲಿ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಸ್ಪರ್ಧೆ ವೇಳೆ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin