ಮಧ್ಯಪ್ರದೇಶ : ಕಂದಕಕ್ಕೆ ಮಿನಿ ಟ್ರಕ್ ಉರುಳಿ 14 ಕಾರ್ಮಿಕರ ಸಾವು
ಜಬ್ಬಲ್ಪುರ್, ಮಾ.27-ಮಿನಿ ಟ್ರಕ್ ಪಲ್ಟಿಯಾಗಿ ಕಂದಕಕ್ಕೆ ಉರುಳಿ ಬಿದ್ದು ಎಂಟು ಮಹಿಳೆಯರೂ ಸೇರಿದಂತೆ 14 ಕಾರ್ಮಿಕರು ಸಾವಿಗೀಡಾಗಿ, ಇತರ 30 ಮಂದಿ ಗಾಯಗೊಂಡಿರುವ ದುರಂತ ಘಟನೆ ಮಧ್ಯಪ್ರದೇಶದ ಜಬ್ಬಲ್ಪುರ್ನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಈ ದುರಂತದಲ್ಲಿ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟು, ಇತರ ಆರು ಮಂದಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಜಬ್ಬಲ್ಪುರ್ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಸೀಂಗ್ ಶಿಖರ್ವರ್ ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
Madhya Pradesh truck