ಮನುಷ್ಯ ‘ಅ’ ದಿಂದ ‘ಆ’ ಕಡೆಗೆ ನಡೆದಾಗಲೇ ನಿಜವಾದ `ಜ್ಞಾ’ ತಲುಪಲು ಸಾಧ್ಯ

jnana

ಮನುಷ್ಯನೊಳಗಿನ ಅರಿವನ್ನು ಹೆಚ್ಚಿಸಿಕೊಳ್ಳಲು ನಮ್ಮೊಳಗೇ ಅಡಗಿರುವ ಕೆಲವು ನಕಾರಾತ್ಮಕ ಶಕ್ತಿಗಳಾದ ಅಹಂಕಾರ, ಅಸಹಜ, ಅಸಮಾಧಾನ, ಅರ್ಧಸತ್ಯ, ಅಂಜಿಕೆ, ಅಪಚಾರ, ಅಸಹಕಾರ, ಅಸಂತೋಷ, ಅತ್ಯಾಚಾರ, ಅಸಹಾಯಕ, ಅನ್ಯಾಯ, ಅನಾಚಾರ, ಅಪಹರಣ, ಅಸತ್ಯ ಮುಂತಾದ ಹಲವು ಕೆಟ್ಟ ಶಕ್ತಿಗಳನ್ನು ನಿಗ್ರಹಿಸಿಕೊಳ್ಳಲು ಆ ಕಡೆಗೆ ನಡೆದಾಗಲೇ ನಿಜವಾದ `ಜ್ಞಾ’ ತಲುಪಲು ಸಾಧ್ಯ.  `ಆ’ ಎಂದರೆ,ಆತ್ಮ ಸಂತೋಷ, ಆತ್ಮೀಯತೆ, ಆತ್ಮ ವಿಶ್ವಾಸ, ಆಚಾರ, ಆಚರಣೆ, ಆತ್ಮ ಸಮಾಲೋಚನೆ, ಆಧ್ಯಾತ್ಮ, ಆಧರಣೀಯ, ಆತ್ಮ ಸಾಕ್ಷಾತ್ಕಾರ, ಪಡೆಯುವುದು. ಇದೇ ಕೊನೆಯ ಜ್ಞಾ, ಅಕ್ಷರವಾದ ಜ್ಞಾನ ಗಳಿಸಲು ಸಾಧ್ಯ. ಇದೇ ನಿಜವಾದ ಆತ್ಮಜ್ಞಾನ.  ದಿಂದ

ಭ್ರಷ್ಟ ಮುಕ್ತ ಭಾರತ… ಸಾಧ್ಯವೇ..?
ಇಲ್ಲಿ ಭ್ರಷ್ಟಾಚಾರ, ಭಾರತ ಎಂಬ ಎರಡು ಮುಖ್ಯವಾದ ಪದಕ್ಕೆ ಸರಿಯಾದ ಅರ್ಥ ತಿಳಿದು ನಡೆದರೆ ಭ್ರಷ್ಟ ಮುಕ್ತ ಭಾರತವಾಗಲು ಸಾಧ್ಯ. ಭ್ರಷ್ಟಾಚಾರ ಭಾರತದಲ್ಲಿದೆಯೋ..? ಭಾರತೀಯರಲ್ಲಿದೆಯೋ..? ದೇಶವನ್ನು ಭಾರತ ಮಾತೆ ಎಂದು ಗೌರವಿಸಿ ಬೆಳೆಸಿದ ಹಿಂದಿನ ಮಹಾತ್ಮರ ನಡೆ-ನುಡಿ ಎಲ್ಲವೂ ಶಿಷ್ಟಾಚಾರದಿಂದ ಕೂಡಿತ್ತು. ಪಾಶ್ಚಾತ್ಯರ ಪ್ರವೇಶದಿಂದ ಇಂಡಿಯಾ ಆಗಿ ಬೆಳೆದು ಮಹಾತ್ಮರ ಹೆಸರಲ್ಲಿ ಧರ್ಮದ ವ್ಯವಹಾರ ರಾಜಕೀಯವಾಗಿ ಬೆಳೆದಿರುವುದೇ ಭ್ರಷ್ಟಾಚಾರಕ್ಕೆ ಕಾರಣವಾಗಿದೆ.  ಮೊದಲು ನಾವು ಬದಲಾಗಬೇಕು. ನಮ್ಮ ಮೂಲ ಶಿಕ್ಷಣ, ಧರ್ಮ, ಸಂಸ್ಕøತಿ, ಭಾಷೆಯೊಳಗಿನ ಸಾತ್ವಿಕಜ್ಞಾನ ನಿಸ್ವಾರ್ಥ ನಿರಹಂಕಾರದ ನಡೆ-ನುಡಿಯಿಂದ ಪಡೆಯಲು ಸಾಧ್ಯ. ನಮ್ಮ ದೇಹದೊಳಗಿನ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ-ಮತ್ಸರಗಳೆಂಬ ರಾಕ್ಷಸರಿಂದ ಮುಕ್ತಗೊಳಿಸಿಕೊಂಡಾಗಲೇ ದೇಶ ಭ್ರಷ್ಟಾಚಾರದಿಂದ ಮುಕ್ತಿ ಪಡೆಯಲು ಸಾಧ್ಯ. ಇದಕ್ಕೆ ಪ್ರಜಾ ಪ್ರಭುತ್ವದಲ್ಲಿ ನಾವ್ಯಾರು..? ಎಂದು ತಿಳಿಯಬೇಕಿದೆ.

 
ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿರುವಂತೆ ಮುಂದಿನ ಯುಗದಲ್ಲಿ ಪ್ರಜೆಗಳೇ ರಾಜರಾಗಿರುತ್ತಾರೆ ಹಾಗೆ ಇಲ್ಲಿ ಪ್ರಜೆಗಳೇ ರಾಜರಾಗಬೇಕಿತ್ತು. ಹಾಗಾಗಿಲ್ಲ. ಯಾವಾಗ ರಾಜ ತನ್ನ ದೇಶ ಹಾಗೂ ರಾಜ್ಯದ ಹಿತಚಿಂತನೆ ಬಿಟ್ಟು ಸ್ವಾರ್ಥ, ಅಹಂಕಾರಕ್ಕೆ ಬಲಿಯಾದನೋ ಆಗಲೇ ಅಧರ್ಮ ಪ್ರಾರಂಭವಾಗಿದೆ. ಕಲಿಯುಗದೊಳಗಿನ ಹಿಂದಿನ ಅನೇಕ ರಾಜರುಗಳ ಅಜ್ಞಾನದ ಪ್ರಭಾವ ಇಂದಿಗೂ ದೇಶವನ್ನು ಹಿಂದಕ್ಕೆ ತಳ್ಳುತ್ತಿದೆ. ರಾಜರ ನಂತರ ಬಂದ ಸ್ವಾತಂತ್ರ್ಯವನ್ನುಅಜ್ಞಾನಕ್ಕೆ ಬಳಸಿಕೊಂಡ ಪ್ರಜೆಗಳು ಈಗ ಸೇವಕರೂ ಅಲ್ಲ, ರಾಜರೂ ಅಲ್ಲ, ಬಡವರೆಂಬ ಕೊರಗಲ್ಲಿ ಬಳಲುವಂತಾಗಿದೆ. ಭಾರತ ದೇಶದೊಳಗೆ ಈಗಲೂ ಅರಗಿಸಿಕೊಳ್ಳಲಾಗದಷ್ಟು ಜ್ಞಾನ ಸಂಪತ್ತಿದ್ದರೂ ಅದನ್ನೂ ವ್ಯವಹಾರಕ್ಕೆ ಬಳಸಿಕೊಂಡು ಪ್ರಜೆಗಳು ತಮ್ಮ ಸ್ವಾರ್ಥದಲ್ಲೇ ಬದುಕಿದರೆ ನಾವ್ಯಾರು..?

 

ವಿಜ್ಞಾನ ಪ್ರಪಂಚ ಮನುಷ್ಯನ ದೇಹವನ್ನುಎತ್ತಿ ಹಿಡಿದು ತನ್ನೊಳಗಿನ ಆತ್ಮವನ್ನೇ ತಳ್ಳಿ ನಡೆದರೆ ನಷ್ಟ ಯಾರಿಗೆ..? ಈಗಲೂ ಕಾಲ ಮಿಂಚಿಲ್ಲ. ಎಲ್ಲವೂ ನಡೆದ ಮೇಲೆಯೇ ಅನುಭವಕ್ಕೆ ಸಿಗೋದು. ಸಾಮಾನ್ಯಜನತೆ ಪ್ರಜಾ ಧರ್ಮಕ್ಕನುಸಾರ ದೇಶ ಹಾಗೂ ರಾಜ್ಯದ ಹಿತಕ್ಕಾಗಿ ಮಕ್ಕಳಿಗೆ ಮೂಲ ಶಕ್ತಿಯಾದ ಜ್ಞಾನದ ಶಿಕ್ಷಣ ನೀಡಿದ್ದೇ ಆದರೆ   ನಮ್ಮನ್ನುಅನುಸರಿಸುತ್ತಿರುವವರಿಗೂ ಜ್ಞಾನ ಬರುತ್ತದೆ, ಭ್ರಷ್ಟಾಚಾರ ತೊಲಗುತ್ತದೆ, ಶಿಷ್ಟಾಚಾರದಿಂದ ದೇಶೊದ್ಧಾರ ಸಾಧ್ಯ.
ಮನುಷ್ಯತನಗೆ ತಾನೇ ಮೋಸ ಮಾಡಿಕೊಳ್ಳುವುದರಲ್ಲಿ ನಿಸ್ಸೀಮ. ಹಾಗಾಗಿ ಅಧರ್ಮದಿಂದಲಾದರೂ ಸ್ವಾರ್ಥ ಬೆಳೆಸಿಕೊಂಡು ಅಕಾರ, ಸ್ಥಾನಮಾನ ಹಣ ಪಡೆದು ಮುಂದಿನ ಜನ್ಮದಲ್ಲಿ ಇಲ್ಲೇ ಹುಟ್ಟಿ ಕಷ್ಟ ಅನುಭವಿಸುತ್ತಾನೆ. ಇದಕ್ಕಾಗಿ ಈಗಲೇ ನಾವು ಎಲ್ಲಿ ಹುಟ್ಟಿರುವೆವೋಅಲ್ಲಿಯ ಧರ್ಮ, ಸಂಸ್ಕøತಿ, ಭಾಷೆ ಜತೆ ಕುಲ ದೇವರು, ಕಸುಬನ್ನು ಶ್ರದ್ಧಾ-ಭಕ್ತಿಯಿಂದ ನಂಬಿ ನಡೆದರೆ ನಾವೇ ರಾಜರು. ಸ್ವಧರ್ಮ, ಸ್ವಾವಲಂಬನೆ, ನಿಸ್ವಾರ್ಥದ ಕಾಯಕದಿಂದ ಕೈಲಾಸ ಕಾಣಲು ಸಾಧ್ಯ. ಇದು ಸಾಮಾನ್ಯ ಪ್ರಜೆಗಳಿಗೆ ಸುಲಭ ಸಾಧ್ಯ. ಭ್ರಷ್ಟಾಚಾರಿಗಳಿಗೆ ಸಹಕಾರ ನೀಡುವುದೂ ಭ್ರಷ್ಟಾಚಾರವೇ. ಪ್ರಜಾ ಪ್ರಭುತ್ವ ದೇಶವನ್ನುಜ್ಞಾನಕ್ಕೆ ಒತ್ತು ಕೊಟ್ಟು ಮುನ್ನಡೆಸಿದಾಗ ನಾವೇ ರಾಜರು.

 
ಭ್ರಷ್ಟಾಚಾರ ಬೆಳೆದಿರುವುದು ಪ್ರಜೆಗಳ ರಾಜಕೀಯದಲ್ಲಿ. ನಾನು ನನ್ನಿಂದ ನನಗಾಗಿ ಎನ್ನುವ ರಾಜಕೀಯ ಭಾವನೆಯೊಳಗೇ ಪ್ರಜಾ ಪ್ರಭುತ್ವ ಸರ್ಕಾರ ನಡೆಯುತ್ತಿರುವಾಗ ಭ್ರಷ್ಟಾಚಾರಕ್ಕೆ ನಮ್ಮೊಳಗಿನ ಸ್ವಾರ್ಥ ಅಹಂಕಾರವೇ ಮೂಲ ಕಾರಣವಾಯಿತು.   ರಾಜಕಾರಣಿಗಳ ಹಾಗೆ ಪ್ರಜೆಗಳಿಗೆ ಅಪವಾದವನ್ನು ಸಹಿಸಿಕೊಂಡಿರಲು ಸಾಧ್ಯವೆ..? ರಾಜಕಾರಣಿಗಳೂ ಮನುಷ್ಯರೇ. ಜನರ ಸಹಕಾರದಿಂದ ಅಕಾರ ಪಡೆದು ಈಗ ಜನರೇ ಅವರನ್ನು ತಮ್ಮ ಸ್ವಾರ್ಥಕ್ಕಾಗಿ ಭ್ರಷ್ಟಾಚಾರಕ್ಕೆ ಇಳಿಸಿದ್ದಾರೆ. ಮೊದಲು ಪ್ರಜೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.   ರಾಜಕಾರಣಿಗಳಿಗೆ ಭ್ರಷ್ಟರು, ದುಷ್ಟರು, ಸ್ವಾರ್ಥಿಗಳು ಎನ್ನುವ ನಮ್ಮಲ್ಲಿ ಆ ಶಕ್ತಿಯಿಲ್ಲವೆ..? ಪ್ರತಿಯೊಂದಕ್ಕೂ ಸರ್ಕಾರದ ಮುಂದೆ ಕೈ ಚಾಚಿ, ನಿಮಗೆ ನಾವು ಮತ ಹಾಕಿದ್ದೇವೆ ಎನ್ನುವ ಅಕಾರದ ಮಾತಾಡುತ್ತಿರುವವರು ಮಧ್ಯವರ್ತಿಗಳು, ಶ್ರೀಮಂತರು, ಬಡವರೆಂಬ ಭೇದ-ಭಾವವಿಲ್ಲದೆ ಒಂದೇ ಸಮ ಬೇಡುತ್ತಿದ್ದರೆ ರಾಜಕಾರಣಿಗಳೇನೂ ದುಡಿದು ಸಾಕಲು ಸಾಧ್ಯವೆ..? ಸಾಲ ಕೊಟ್ಟು ಸಾಲ ಮನ್ನಾ ಮಾಡಿಯೂ ಇನ್ನೂ ಸಾಲದಲ್ಲೇ ಮುಳುಗಿರುವ ಪ್ರಜೆಗಳಿಗೆ ಜ್ಞಾನವಿಲ್ಲ. ರಾಜ್ಯದ ಹಾಗೂ ದೇಶದ ಸಾಲಕ್ಕೆ ಪ್ರಜೆಗಳೇ ಕಾರಣರಾಗಿ ಈಗದನ್ನುತೀರಿಸಲು ವಿದೇಶಿ ಬಂಡವಾಳಕ್ಕೆ ರಾಜಕಾರಣಿಗಳು ಮುಂದಾಗಿರುವುದು ಅಸಹ್ಯಕರ ಹಾಗೂ ಅಜ್ಞಾನದ ವಿಚಾರ.

 
ಇದನ್ನೂದೊಡ್ಡ ಬೆಳವಣಿಗೆಯೆಂದು ಪ್ರಜೆಗಳು ವಿದೇಶಿ ಕಂಪೆನಿಗಳಿಗೆ ತಮ್ಮ ಭೂಮಿಯನ್ನೇ ಬಿಟ್ಟುಕೊಟ್ಟು ಅವರ ಅಡಿಯಾಳಾಗಿಯೋ ಇಲ್ಲ ಕೆಲಸವೇ ಇಲ್ಲದೆ ಸಾಯುವ ಸ್ಥಿತಿ ಬಂದಾಗ ತಮ್ಮ ತಪ್ಪಿಗೆ ಸರ್ಕಾರ ಕಾರಣವೆನ್ನೋ ಬದಲು ಈಗಲೇ ಎಚ್ಚೆತ್ತುಕೊಂಡು ತಮ್ಮ ಭೂಮಿಯಲ್ಲೇ ಸ್ವಾವಲಂಬಿಗಳಾಗಿ ದುಡಿದು ಸಾಲ ತೀರಿಸಿದರೆ ಸ್ವತಂತ್ರರಾಗುವುದಿಲ್ಲವೆ..? ವೈಜ್ಞಾನಿಕ ಬೆಳವಣಿಗೆಯೇ ದೇಶವನ್ನು ಅಧರ್ಮದತ್ತ ಎಳೆಯುತ್ತಿದೆ. ಸ್ವಾರ್ಥದ ರಾಜಕೀಯ ಪ್ರಜೆಗಳಲ್ಲಿ ಮನೆ ಮಾಡಿದೆ. ಧರ್ಮದ ತಿಳುವಳಿಕೆಯಿಲ್ಲದ ಶಿಕ್ಷಣದಿಂದ ದೇಶವೇ ಅಧರ್ಮಕ್ಕೆ ಬಲಿಯಾಗಿದೆ. ಧಾರ್ಮಿಕ ಪ್ರಚಾರಕರೂ ರಾಜಕೀಯವನ್ನು ದುರುಪಯೋಗಪಡಿಸಿಕೊಂಡಿರುವುದೇ ಇದಕ್ಕೆ ಕಾರಣ. ರಾಜಕೀಯ ಪ್ರವೃತ್ತಿ ಧರ್ಮಕ್ಕೆ ವಿರೋಧ. ಯಾರೂ ಯಾರನ್ನೂ ನಡೆಸುತ್ತಿಲ್ಲ. ನಾವೇ ಎಲ್ಲದ್ದಕ್ಕೂ ಕಾರಣ.

 
ಸ್ತ್ರೀಗೆಜ್ಞಾನ ಮುಖ್ಯ. ಜ್ಞಾನದಿಂದ ಕೊಟ್ಟು ತೆಗೆದುಕೊಳ್ಳುವ ವ್ಯವಹಾರವಿರದೆ ನಿಸ್ವಾರ್ಥ, ನಿರಹಂಕಾರ, ಸ್ವಾವಲಂಬನೆ ಬೆಳೆಯುತ್ತದೆ. ಇದರಲ್ಲಿ ವ್ಯವಹಾರವೇ ಮುಖ್ಯ. ಧರ್ಮ, ಸತ್ಯ, ನ್ಯಾಯ, ನೀತಿ, ಸಂಸ್ಕøತಿ ಎಲ್ಲವೂ ಇಂದು ವಿಜ್ಞಾನಮಯವಾಗಿದೆ. ಇದು ರಾಜಕೀಯ ಪ್ರ ಜ್ಞೆ ಬೆಳೆಸಿದ್ದರೂ ಧಾರ್ಮಿಕ ಪ್ರಜ್ಞೆ ಹಿಂದುಳಿಸಿ ಹಿಂದೂಗಳಲ್ಲಿಯ ಆತ್ಮಜ್ಞಾನವನ್ನೇ ಹಿಂದಕ್ಕೆ ತಳ್ಳಿ ಹಿಂದುಳಿದವರ ಸಾಲಿನಲ್ಲಿ ನಿಲ್ಲಿಸಿದೆ. ಇದಕ್ಕೆ ನಮ್ಮ ಪರಾವಲಂಬನೆಯ ಶಿಕ್ಷಣವೇ ಮೂಲ ಕಾರಣ.
ತಾಯಿಯನ್ನು ಹೇಗೆ ಗೌರವಿಸಬೇಕೆಂಬುದನ್ನು ಸ್ವತಃ ತಾಯಿಯಾದವಳಿಗೆ ತಿಳಿಯದಿದ್ದರೆ ಮಕ್ಕಳ ಗತಿ ಏನು..? ಪುರುಷ ಪ್ರಧಾನ ಸಮಾಜವೆಂದು ಹಿಂದಿನಿಂದಲೂ ಬೆಳೆದು ಬಂದಿದೆ. ಅದಕ್ಕೆ ಸ್ತ್ರೀ ಪರೋಕ್ಷವಾಗಿ ಬೆಂಬಲಿಸಿಕೊಂಡೇ ಬಂದಿದ್ದರೂ ಬೆಂಬಲಿಗರನ್ನೇ ಮೂಲೆ ಗುಂಪು ಮಾಡುವ ಕೆಟ್ಟ ಅಭ್ಯಾಸ ಯಾರಿಗಿದೆ..? ಭಾರತ ದೇಶವನ್ನುಉಳಿಸಿ-ಬೆಳೆಸಲು ಸ್ತ್ರೀಯಿಂದ ಮಾತ್ರ ಸಾಧ್ಯ. ಈಗಿರುವ ಪರಿಸ್ಥಿತಿಯಲ್ಲಿ ಸ್ತ್ರೀ ಮನಸ್ಸು ಹಾಗೂ ಮನೆಯನ್ನು ಗಟ್ಟಿಯಾಗಿಸಿಕೊಂಡು ಮರ್ಯಾದೆಯಿಂದ ನಡೆದುಕೊಳ್ಳುವುದು ಉತ್ತಮ.

 
ಇಂದು ಹಲವು ಕಡೆ ಹೆಣ್ಣು ಮಕ್ಕಳಿಂದ ಹಿಡಿದು ಮುದುಕಿಯವರೆಗೆ ಮಾನಸಿಕ ಹಾಗೂ ದೈಹಿಕ ಶೋಷಣೆಗಳು ನಡೆಯುತ್ತಿದ್ದರೂ ಸಮಾಜ ಅದನ್ನು ತಿರಸ್ಕಾರದಿಂದಲೇ ತಳ್ಳಿ ಹಾಕಿ ಪ್ರಚಾರಕ್ಕಷ್ಟೇ ಸೀಮಿತವಾಗಿಟ್ಟು ಕೊಂಡಿರುವುದು ಸತ್ಯ. ಹಾಗಾದರೆ ಸ್ತ್ರೀ ಸಂಘಟನೆಗಳು, ಸ್ತ್ರೀ ಶಕ್ತಿ ಸಮಾಜಗಳು, ಮಹಿಳಾ ಸಂಘ-ಸಂಸ್ಥೆಗಳು ಯಾವ ರೀತಿಯಲ್ಲಿ ಸಮಾಜದಲ್ಲಿ ಸ್ತ್ರೀಗಾಗುತ್ತಿರುವ ಅನ್ಯಾಯಕ್ಕೆ ಕಾನೂನಿನಲ್ಲಿ ಬದಲಾವಣೆ ತಂದು ನ್ಯಾಯ ದೊರಕಿಸುತ್ತಿದ್ದಾರೆ. ಒಳ್ಳೆಯ ವಿಚಾರಗಳು ಸ್ತ್ರೀ ಮೂಲಕವೇ ಹೊರಗೆ ಬರಬೇಕಿತ್ತು.  ಸತ್ಯ, ಧರ್ಮ, ನ್ಯಾಯ, ನೀತಿ, ಸಂಸ್ಕೃತಿ  ಭಾಷೆಯ ರಕ್ಷಣೆ ಜ್ಞಾನಿ ಎನಿಸಿಕೊಂಡ ಸ್ತ್ರೀಯಿಂದಲೇ ಬೆಳೆಯಬೇಕಿತ್ತು. ಇದಕ್ಕೆ ವಿರುದ್ಧವಾಗಿ ಎಷ್ಟೋ ಸ್ತ್ರೀಯರು ಹಣ ಸಂಪಾದನೆಗಾಗಿ ತನ್ನೊಳಗಿನ ಜ್ಞಾನವನ್ನೇ ಮರೆತು ನಡೆದಿದ್ದಾರೆ.  ಹೆಸರು, ಹಣ, ಸ್ಥಾನಮಾನ ಪ್ರತಿಷ್ಠೆಯಿಂದ ದೇಶದ ಋಣ ತೀರಿಸಲು ಸಾಧ್ಯವಿಲ್ಲ. ಒಳ್ಳೆಯಜ್ಞಾನದಿಂದ ಮಾತ್ರ ಇದು ಸಾಧ್ಯ. ವಿಜ್ಞಾನವನ್ನೇ ಸತ್ಯವೆಂದು ಹೊರ ಪ್ರಪಂಚದಲ್ಲಿ ಸುಖ ಅನುಭವಿಸುತ್ತಿರುವವರಿಗೆ ಒಳಗಿನ ಕೊಳಕನ್ನು ತೊಳೆಯಲು ಅಸಾಧ್ಯ. ರಾಜಕೀಯ ಪ್ರಜಾ ಪ್ರಭುತ್ವಕ್ಕೆ ವಿರುದ್ಧವಾಗಿದೆ. ಇದಕ್ಕೆ ಸ್ತ್ರೀ ಎಚ್ಚರವಾಗಿರಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin