ಮನೆಗೆ ಆಕಸ್ಮಿಕ ಬೆಂಕಿ : ಮಹಿಳೆ ಪಾರು

Spread the love

1

ಮುಂಡಗೋಡ,ಜ.10- ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 3 ಲಕ್ಷ ರೂ. ಹಾನಿಯಾಗಿರುವ ಘಟನೆ ನಿನ್ನೆ ಪಟ್ಟಣದ ನೆಹರು ನಗರದಲ್ಲಿ ಸಂಭವಿಸಿದೆ ಪಿ.ಎಲ್.ಡಿ ಬ್ಯಾಂಕ್ ಹಿಂಬಾಗದ ನೆಹರುನಗರ ಬಡಾವಣೆಯ ಸುಂದರಾಬಾಯಿ ಶೇಟ್ ಎಂಬುವವರ ಮಾಲಿಕತ್ವದ ಮನೆಯಲ್ಲಿ ಬಾಡಿಗೆದಾರ ರಾಗಿ ವಾಸವಾಗಿರುವ ಇಲಿಯ ಟ್ಯಾಕ್ಸಿ ಸ್ಟ್ಯಾಂಡ ಏಜಂಟ್ ಅಶೋಕ ಮೈಸೂರ ಎಂಬುವವರ ಮನೆಯೇ ಬೆಂಕಿಗಾಹುತಿಯಾಗಿದೆ.ಇದರ ಪರಿಣಾಮ ಮನೆಯಲ್ಲಿದ್ದ ಇವರ ಪತ್ನಿ ವೀಣಾ ಮೈಸೂರ ಕೈ ಸುಟ್ಟಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಬೆಂಕಿ ಆಹುತಿಯಿಂದ ಮನೆಯಲ್ಲಿದ್ದ ಗೃಹ ಬಳಿಕೆ, ಬಟ್ಟೆ, ಹಾಗೂ ಪೀಠೋಪಕರಣ ಸಂಪೂರ್ಣ ಕರಕಲಾಗಿವೆ.

ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದ ವೀಣಾ ಮೈಸೂರ ವ್ಯಾಪಾರಕ್ಕೆ ತಂದಿಟ್ಟ ಸೀರೆಗಳು ಬೆಂಕಿಗೆ ಆಹುತಿಯಾಗಿ ಅಪಾರ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಸುದ್ದಿ ತಿಳಿದ ಇಲ್ಲಿನ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ ಆಗಬಹುದಾದ ಮತ್ತಷ್ಟು ಅನಾಹುತ ತಪ್ಪಿಸಿದ್ದಾರೆ. ಬೆಳಿಗ್ಗೆ ಸ್ನಾನಕ್ಕೆ ನೀರು ಕಾಯಿಸಲು ಹಚ್ಚಲಾಗಿದ್ದ ನೀರೊಲೆಯ ಬೆಂಕಿಯ ಕಿಡಿ ಹಾರಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪ.ಪಂ ಅಧ್ಯಕ್ಷ ರಫೀಕ ಇನಾಮದಾರ ಮುಂತಾದವರು ಭೈೀಟಿ ನೀಡಿ ಸಾಂತ್ವನ ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin