ಮನ್ ಕೀ ಬಾತ್ ನಲ್ಲಿ ಕರ್ನಾಟಕದ ಸೀತವ್ವ ಜೋಡಟ್ಟಿ ಸಾಧನೆ ಶ್ಲಾಘಿಸಿದ ಮೋದಿ

Spread the love

Seetavva--01
ನವದೆಹಲಿ, ಜ.28-ಕರ್ನಾಟಕ ಸಾಧಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮುಂದುವರಿದಿದ್ದು, ಮಹಿಳಾ ಅಭಿವೃದ್ದಿ ಸಂಸ್ಥೆಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ದೇವದಾಸಿ ಬೆಳಗಾವಿಯ ಸೀತವ್ವ ಜೋಡಟ್ಟಿ ಸೇವಾ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಈ ವರ್ಷದ ತಮ್ಮ ಪ್ರಥಮ ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೀತವ್ವ ಜೋಡಟ್ಟಿ ತನ್ನ 7ನೇ ವಯಸ್ಸಿಗೇ ದೇವದಾಸಿಯಾಗಿದ್ದರು. ನಂತರ ಮಹಿಳೆಯರ ಏಳಿಗೆಗಾಗಿ ಅಪಾರ ಶ್ರಮವಹಿಸಿದರು. ಈಗ ಅವರು ಮಹಿಳಾ ಅಭಿವೃದ್ದಿ ಸಂಸ್ಥೆಯ ಸಿಇಒ ಆಗಿದ್ದಾರೆ. ಅವರ ಮಹಿಳಾ ವರ್ಗಕ್ಕೆ ಪ್ರೇರಣೆ ಎಂದು ಮೆಚ್ಚುಗೆ ಸೂಚಿಸಿದರು.

ಗಗನಯಾತ್ರಿ ಕಲ್ಪನಾ ಚಾವ್ಲಾರನ್ನು ಸ್ಮರಿಸಿದ ಅವರು ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳೆಯರು ಸಕ್ರಿಯವಾಗಿ ತೊಡಗಿದ್ದಾರೆ. ದೇಶದ ಗೌರವವನ್ನು ಹೆಚ್ಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಛತೀಸ್‍ಗಢದಲ್ಲಿ ಮಹಿಳೆಯರು ಇ-ಆಟೋ ಚಾಲನೆ ಮಾಡುತ್ತಿದ್ದಾರೆ. ಮುಂಬೈನ ಮಾತುಂಗ್ ರೈಲ್ವೆ ನಿಲ್ದಾಣವನ್ನು ಸಂಪೂರ್ಣ ಮಹಿಳಾ ಉದ್ಯೋಗಿಗಳೇ ನಿಭಾಯಿಸುತ್ತಿದ್ದಾರೆ ಎಂದು ಮೋದಿ ಶ್ಲಾಘಿಸಿದರು.   ಮಹಿಳೆಯರು ಸದಾ ಪ್ರೇರಣೆಯ ಶಕ್ತಿ. ಅವರು ಸದಾ ಸ್ಫೂರ್ತಿದಾಯಕ. ಒಬ್ಬ ಹೆಣ್ಣು ಮಗಳು 10 ಗಂಡು ಮಕ್ಕಳಿಗೆ ಸರಿಸಮ. ಈ ಬಗ್ಗೆ ನಮ್ಮ ಪುರಾಣ, ಪುಣ್ಯಕಥೆಗಳಲ್ಲೂ ಉಲ್ಲೇಖವಿದೆ ಎಂದು ಪ್ರಧಾನಿ ತಿಳಿಸಿದರು.

Facebook Comments

Sri Raghav

Admin