ಮರಗಳ ನಾಶ ಮಾಡುತ್ತಿರುವ ಸರಕು ಸಾಗಾಣೆಕೆ ವಾಹನಗಳು

chikkamangaluru4
ಚಿಂತಾಮಣಿ, ಏ.24- ನಗರದ ಚೇಳೂರು ರಸ್ತೆಯಿಂದ ಮುರಗಮಲ್ಲಾ ರಸ್ತೆಯ ತಿರುವಿನವರೆವಿಗೂ ಮರಗಳು ರಸ್ತೆ ಬದಿ ನಾಟಿ ಮಾಡಿ ಬೆಳೆದಿದ್ದು ಸರಕು ಸಾಗಾಣೆಕೆ ವಾಹನಗಳು ಅದರ ಕೆಳಗೆ, ಅಕ್ಕಪಕ್ಕ ನಿಲ್ಲಿಸಿ ಗಿಡಗಳನ್ನು ನಾಶ ಮಾಡುತ್ತಿದ್ದು ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ನಗರದ ಪರಿಸರ ಪ್ರೇಮಿ ಮತ್ತು ದಸಂಸ ಮುಖಂಡ ನರಸಿಂಹಪ್ಪ ನಗರಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ರಸ್ತೆಯಲ್ಲಿ ಸರಕು ಸಾಗಾಣೆಕೆ ವಾಹನಗಳು ರಸ್ತೆ ಬದಿ ನಿಲ್ಲಿಸಿ ಸರ್ವಜನಿಕರಿಗೆ ಮತ್ತು ಗಿಡಮರಗಳಿಗೆ ಹಾನಿಮಾಡುತ್ತಾ ಮರ-ಗಿಡಗಳನ್ನು ನಾಶಮಾಡುತ್ತಿದ್ದಾರೆ. ವಾಹನಗಳನ್ನು ಖಾಲಿ ಇರುವ ಸ್ಥಳಗಳಿಗೆ ಸ್ಥಳಾಂತರ ಮಾಡಿ ಗಿಡ-ಮರಗಳನ್ನು ಉಳಿಸುವಂತೆ ದೂರಿನಲ್ಲಿ ವಿವರಿಸಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿಗೆ ಸಲ್ಲಿಸಿ ಮರಗಿಡಗಳು ಬೆಳೆಯುತ್ತಿರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ ನಾಶ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಯವರು ಸಹ ಪೊಲೀಸ್ ಇಲಾಖೆಗೆ ದೂರು ಸಲ್ಲಿಸುವಂತೆ ಮನವಿಯಲ್ಲಿ ವಿವರಿಸಿದ್ದಾರೆ.ತಮ್ಮ ಮನವಿ ಸ್ಪಂದಿಸಿ ಕ್ರಮಕೈಗೊಳ್ಳದ ಪಕ್ಷದಲ್ಲಿ ದಸಂಸ ಮತ್ತು ವಿವಿಧ ಸಂಘಗಳವತಿಯಿಂದ ರಸ್ತೆತಡೆ ಹಾಗೂ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗುವುದು. ಎಂದು ಅವರು ದೂರಿನಲ್ಲಿ ಎಚ್ಚರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin