ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಕಡ್ಡಾಯ, ಗರಿಷ್ಠ ಟಿಕೆಟ್ ದರ 200 ರೂ.
ಬೆಂಗಳೂರು, ಮಾ.15– ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 2017-18ನೇ ಸಾಲಿನಲ್ಲಿ 283 ಕೋಟಿ ರೂ ನೀಡುವುದಾಗಿ ಬಜೆಟ್ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಎಲ್ಲಾ ಜಿಲ್ಲೆಗಳಲ್ಲಿ ಮೂರು ದಿನಗಳ ಜಿಲ್ಲಾ ಮಾಹಿತಿ ಉತ್ಸವ ಆಯೋಜನೆಗಾಗಿ 16 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.
ಧ್ವನಿ-ಬೆಳಕು:
ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾ ಚರಣೆಯು 2018ರ ಅಕ್ಟೋಬರ್ 2ರಿಂದ ಪ್ರಾರಂಭವಾಗು ವುದರಿಂದ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಮಹಾತ್ಮ ಗಾಂಧೀಜಿ ಧ್ವನಿ- ಬೆಳಕು ಪ್ರದರ್ಶನವನ್ನು ಆಯೋಜಿಸಲು 5ಕೋಟಿ ರೂ. ನೀಡುವುದಾಗಿ ಸಿಎಂ ತಿಳಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವಿರುವ ಅರಸೀಕೆರೆಯ ಕಸ್ತೂರ ಬಾ ಆಶ್ರಮ ಅಭಿವೃದ್ಧಿಗಾಗಿ 2ಕೋಟಿ. ರೂ. ನೀಡಲಾಗುತ್ತದೆ. ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳ ಒಂದು ಪರದೆಯಲ್ಲಿ ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳ ಚಲನ ಚಿತ್ರ ಪ್ರದರ್ಶನವನ್ನು ಕಡ್ಡಾಯಗೊಳಿಸುವುದಾಗಿ ಘೋಷಿಸಿದ್ದಾರೆ. ಮದ್ಯಾಹ್ನ 1.30ರಿಂದ 7.30ರ ಅವಧಿಯಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರ ಪ್ರದರ್ಶನ ಮಾಡಲೇ ಬೇಕಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕ ರೀತಿಯ ಪ್ರವೇಶ ದರ ನೀತಿ ಜಾರಿಗೆ (200 ರೂ ಗರಿಷ್ಠ ದರ) ತರುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.
[ ರಾಜ್ಯ ಬಜೆಟ್ 2017-18 (Live Updates) ]
< Eesanje News 24/7 ನ್ಯೂಸ್ ಆ್ಯಪ್ >