ಮಲ್ಟಿಫ್ಲೆಕ್ಸ್ – ಚಲನಚಿತ್ರಮಂದಿರಗಳಲ್ಲಿ ಎಳನೀರು ಮಾರಾಟಕ್ಕೆ ಅಧಿಸೂಚನೆ

coconut-Water--01

ಬೆಂಗಳೂರು,ಮಾ.16-ರಾಜ್ಯದ ಮಲ್ಟಿಫ್ಲೆಕ್ಸ್ ಹಾಗೂ ಚಲನಚಿತ್ರ ಮಂದಿರಗಳಲ್ಲಿ ಎಳನೀರು ಮಾರಾಟ ಮಾಡಲು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವುದಾಗಿ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ವಿಧಾನಪರಿಷತ್‍ನಲ್ಲಿ ತಿಳಿಸಿದರು. ಎಂ.ಕೆ.ಪ್ರಾಣೇಶ್ ಅವರ ಪ್ರಶ್ನೆಗೆ ಹಾಗೂ ರೋಷನ್ ಬೇಗ್ ಅವರ ಪರವಾಗಿ ಮಾತನಾಡಿದ ಪ್ರಕಾಶ್ ಖಂಡ್ರೆ , ಮಲ್ಟಿಫ್ಲೆಕ್ಸ್ ಹಾಗೂ ಚಲನಚಿತ್ರ ಮಂದಿರಗಳಲ್ಲಿ ಎಳನೀರು ಮಾರಾಟ ಮಾಡಬೇಕೆಂದು ಇಲಾಖೆಯು ಅಧಿಸೂಚನೆ ಹೊರಡಿಸಲಿದೆ. ಮಲ್ಟಿಫ್ಲೆಕ್ಸ್ ಹಾಗೂ ಚಲನಚಿತ್ರ ಮಂದಿರಗಳಲ್ಲಿ ತಂಪುಪಾನೀಯಗಳನ್ನು ನಿಷೇಧ ಮಾಡಲು ಸಾಧ್ಯವಿಲ್ಲ. ಎಳನೀರು ಮಾರಾಟ ಮಾಡುವಂತೆ ಮನವಿ ಮಾಡಲಾಗುವುದು. ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಈ ಕ್ರಮ ಕೈಗೊಳ್ಳಲಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin