ಮಳೆಗಾಗಿ ಜೀವಂತ ವ್ಯಕ್ತಿಗೆ ಮೃತದೇಹದ ಸಿಂಗಾರ ಮಾಡಿ ಸ್ಮಶಾನಕ್ಕೆ ಕರೆದೊಯ್ದರು..!

Spread the love

ballari

ಬಳ್ಳಾರಿ,ಸೆ.16-ಮಳೆಗಾಗಿ ಮಳೆರಾಯನನ್ನು ಮಾಡಿ ನೀರಿಗೆ ಬಿಡುವುದು ಹಾಗೂ ನಾಯಿಗಳಿಗೆ ಮದುವೆ ಮಾಡುವುದು ಕೇಳಿದ್ದೇವೆ. ಆದರೆ ಮಳೆಗಾಗಿ ಜೀವಂತ ವ್ಯಕ್ತಿಯನ್ನು ವಿಧಿವಿಧಾನಗಳ ಮೂಲಕ ಸ್ಮಶಾನಕ್ಕೆ ಮೆರವಣಿಗೆ ಮಾಡುವ ಅಪರೂಪದ ಸಂಗತಿ ಜಿಲ್ಲೆಯ ಭೀಮಸಮುದ್ರದಲ್ಲಿ ಇಂದು ನಡೆದಿದೆ. ಮಳೆಯಿಲ್ಲದೆ ಕಂಗಾಲಾಗಿರುವ ಜಿಲ್ಲೆಯ ಜನತೆ ಮಳೆಗಾಗಿ ಸಾಂಪ್ರದಾಯಿಕ ಪದ್ಧತಿಗಳನ್ನು ಆಚರಿಸುವತ್ತ ಮುಖ ಮಾಡಿದ್ದಾರೆ. ಮಳೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರು ಭೀಮಸಮುದ್ರದ ವೃದ್ದರೊಬ್ಬರಿಗೆ ವಿಧಿವಿಧಾನಗಳನ್ನು ನಡೆಸಿ ಜೀವಂತವಾಗಿ ಸ್ಮಶಾನಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ದು ಮಳೆಗಾಗಿ ಪ್ರಾರ್ಥಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin