ಮಳೆಗಾಗಿ ಮುಸ್ಲಿಂ ಬಾಂಧವರ ಪ್ರಾರ್ಥನೆ

MUSLIM--BANDAVARU

ಕಡೂರು, ಸೆ.14-ಪಟ್ಟಣದ ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಎಮ್ಮೆದೊಡ್ಡಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಆಚರಿಸಿ ಸಂಭ್ರಮಿಸಿದರು. ಬೆಳಗ್ಗೆಯಿಂದಲೆ ಬಡವರಿಗೆ ದಾನದ ಮೂಲಕ ಕಾಣಿಕೆಯನ್ನು ಸಮರ್ಪಿಸಿ,ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ನಂತರ ಈದ್ಗಾ ಮೈದಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಗೆ ತೆರಳಿದರು.ಮಕ್ಕಳು,ಯುವಕರು ಶುಭ್ರ ಬಟ್ಟೆ ಸುಗಂಧದ್ರವ್ಯಗಳನ್ನು ಲೇಪಿಸಿಕೊಂಡು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಸಮಾಜದ ಗುರುಗಳಾದ ಜಬೀಹುಲ್ಲಾ ಈ ಬಾರಿ ಮಳೆಯಿಲ್ಲದೆ ಬೆಳೆ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ.ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಮುಂದೆ ಕಾಣಲಿದ್ದು ಅಲ್ಲಾನ ಕೃಪೆಯಿಂದ ಮಳೆ ಬೆಳೆ ಬಂದು ಜನರು ಹರ್ಷಗೊಳ್ಳಲಿ ಎಂದು ಪ್ರಾರ್ಥಿಸಿದರು. ಇತ್ತೀಚಿನ ದಿನಗಳಲ್ಲಿ ವಾತಾವರಣ ಕಲುಷಿತಗೊಳ್ಳುತ್ತಿದೆ ಎಲ್ಲಾ ಸಮುದಾಯದಗಳು ಸಹಬಾಳ್ವೆಯಿಂದ ನಡೆದುಕೊಳ್ಳಬೇಕಾಗಿದೆ ಎಂಬ ಸಂದೇಶವನ್ನು ನೀಡಿದರು.

ಮಸೀದಿಯ ಅಧ್ಯಕ್ಷ ಅಬೀಬುಲ್ಲ ಖಾನ್ ಮಾತನಾಡಿ ಈಗ ಇರುವ ಮಸೀದಿ ನೂರಾರು ವರ್ಷಗಳ ಕಾಲದ್ದಾಗಿದ್ದು ಇದನ್ನು ಕೆಡವದೆ ನವೀಕರಣಗೊಳಿಸಲು ಮುಂದಾಗಿದ್ದು ಮುಸ್ಲಿಂ ಬಾಂಧವರ ಸಹಕಾರ ಮುಖ್ಯವಾಗಿದೆ ಎಂದರು. ಸಮಾಜದ ಹಿರಿಯ ಮುಖಂಡ ಎನ್.ಬಶೀರ್ ಸಾಬ್ ಮಾತನಾಡಿ ನೀರಿಗಾಗಿ,ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ಮುಸ್ಲಿಂ ಬಾಂಧವರು ಇಂದು ನಡೆಸಿದ್ದು.ರಾಜ್ಯದಲ್ಲಿ ನೀರಿಗಾಗಿ ಹೋರಾಟ ನಡೆಯುತ್ತಿದೆ.ಜನರಲ್ಲಿ ಶಾಂತಿ ನೆಮ್ಮದಿ ತರಲು ಮೊದಲು ಮಳೆ ಬರಬೇಕಾಗಿದೆ.ಮಳೆ ಬಂದರೆ ಎರಡು ರಾಜ್ಯದ ಜನರಿಗೆ ನೆಮ್ಮದಿ ಕಾಣಲು ಸಾಧ್ಯ ಎಂದರು. ಮಸೀದಿಯ ಕಾಯ್‍ದರ್ಶಿ ಅಸ್ಕರ್ ಅಹಮದ್,ಇಮಾಮ್,ತನ್ವೀರ್ ಅಹಮದ್,ಇಸ್ಮಾಯಿಲ್, ಮಂಡಿ ಇಕ್ಬಾಲ್,ಅಜೀಬ್ ದಸ್ತಗೀರ್ ಸಾಬ್,ಡಿ.ಕೆ.ಹೈದರ್ ಖಾನ್ ಮತ್ತು ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಇದ್ದರು.

 

► Follow us on –  Facebook / Twitter  / Google+

Sri Raghav

Admin