ಮಸೂದ್ ನಿರ್ಬಂಧಕ್ಕೆ ವಿಳಂಬ ಮಾಡುತ್ತಿರುವ ವಿಶ್ವಸಂಸ್ಥೆಗೆ ಭಾರತ ತರಾಟೆ
ವಾಷಿಂಗ್ಟನ್, ನ.8– ಜೈಷ್-ಎ-ಮಹಮದ್ ಉಗ್ರಗಾಮಿ ಸಂಘಟನೆ ಮುಖಂಡ ಮೌಲಾನಾ ಮಸೂದ್ ಅಜರ್ ನಿರ್ಬಂಧಕ್ಕೆ ವಿಳಂಬ ಮಾಡುತ್ತಿರುವ ವಿಶ್ವಸಂಸ್ಥೆಯ ಭದ್ರತಾಮಂಡಳಿಯ ಧೋರಣೆಯನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಾನೇ ಗುರುತಿಸಿ ಪಟ್ಟಿ ಮಾಡಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ನಾಯಕರ ಮೇಲೆ ನಿಷೇಧ ವಿಧಿಸಲು ಹಲವಾರು ತಿಂಗಳಿಂದ ವಿಳಂಬ ಮಾಡುತ್ತಿರುವ ಭದ್ರತಾ ಮಂಡಳಿ ಕ್ರಮವನ್ನು ವಿಶ್ವಸಂಸ್ಥೆ ಭಾರತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಕಟುವಾಗಿ ಟೀಕಿಸಿದ್ದಾರೆ. ವಿಶ್ವಸಂಸ್ಥೆಯಿಂದ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ಗೆ ನಿರ್ಬಂಧ ವಿಧಿಸಲು ಯತ್ನಿಸುತ್ತಿರುವ ಭಾರತದ ಯತ್ನಕ್ಕೆ ತಾಂತ್ರಿಕ ಕಾರಣಗಳ ನೆಪದಿಂದ ತಿಂಗಳುಗಟ್ಟಲೆ ವಿಳಂಬವಾಗುತ್ತಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ಧಾರೆ.
ಭದ್ರತಾಮಂಡಳಿಯು ತಾನೇ ರೂಪಿಸಿದ ನೀತಿಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ ಎಂಬುದು ಅಕ್ಬರುದ್ದೀನ್ ಅವರ ನೇರ ಆರೋಪವಾಗಿದೆ.
► Follow us on – Facebook / Twitter / Google+