ಮಹದಾಯಿ ವಿವಾದ : ಮೂರು ರಾಜ್ಯಗಳ ಮುಖ್ಯಮತ್ರಿಗಳ ಸಭೆ

Spread the love

Mahadayai

ಬೆಂಗಳೂರು. ಸೆ.01 ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಮೂರು ರಾಜ್ಯಗಳ ನಡುವೆ ಇರುವ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹದಾಯಿ ನ್ಯಾಯಮಂಡಳಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಆಹ್ವಾನಿಸಿದೆ. ಇದಕ್ಕೆ ಮೂರು ರಾಜ್ಯಗಳು ಸಮ್ಮತಿ ಸೂಚಿಸಿದ್ದು ಚರ್ಚೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸೂಕ್ತ ವೇದಿಕೆ ಎಂದು ಪರಿಗಣಿಸಿವೆ.  ಈಗಾಗಲೇ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಳೆದೊಂದು ವರ್ಷದಿಂದ ವ್ಯಾಪಕ ಹೋರಾಟ ನಡೆಸುತ್ತಿರುವ ರೈತರಿಗೆ ಸಮಾಧಾನಕರ ಸುದ್ದಿಯಾಗಿದೆ. ಈಗಾಗಲೇ ನ್ಯಾಯಮಂಡಳಿ ನೀಡಿರುವ ಆಹ್ವಾನವನ್ನು ಒಪ್ಪಿಕೊಳ್ಳಲಾಗಿದೆ ಎಂದು ನ್ಯಾಯ ಮಂಡಳಿಯಲ್ಲಿ ವಕೀಲರಾಗಿ ವಾದ ಮಂಡಿಸಿದ್ದ ಮೂರು ರಾಜ್ಯಗಳ ನ್ಯಾಯವಾದಿಗಳು ಮಾಧ್ಯಮಗಳಿಗೆ ಧೃಢಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin