ಮಹಾಮಾಯಿ ಹುಲಿ ಹಿಡಿದ ಆಕಳ ನಾಟಕ ಪ್ರದರ್ಶನ

Spread the love

belagam-10
ಧಾರವಾಡ,ಸೆ.16- ಮಹಾಮಾಯಿ ಹಾಗೂ ಹುಲಿ ಹಿಡಿದ ಆಕಳ ನಾಟಕಗಳ ಪ್ರದರ್ಶನವನ್ನು ದಕ್ಷ ನಿರ್ದೇಶನ, ಉತ್ತಮ ರಂಗಸಜ್ಜಿಕೆ, ಯುವ ನಟರ ಅಭಿನಯ, ಪರಿಕರ ಪ್ರಸಾಧನಗಳಿಂದ ಬಹಳ ವರ್ಷಗಳ ನಂತರ ರಂಗಪಯಣ ಹಾಗೂ ಕನ್ನಡ ಮತ್ತು  ಸಾಂಸ್ಕೃತಿ  ಇಲಾಖೆ ಸಂಯುಕ್ತಾಶ್ರಯದಲ್ಲಿ ಪ್ರೇಕ್ಷಕರಿಗೆ ಡಾ. ಪಾಟೀಲ ಪುಟ್ಟಪ್ಪ ಸಭಾಭವನದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನೀಡಲಾಯಿತು.  ಜನಪದ ಪುರಾಣಕ್ಕೆ ಸಮಕಾಲೀನ ಬದುಕಿನ ಸ್ಪರ್ಶ ನೀಡುಲ್ಲಿ ಡಾ ಕಂಬಾರರು ಪ್ರವೀಣರು. ಶೆಟವಿತಾಯ, ಸಂಜೀವಶಿವ ಇವರಿಬ್ಬರ ಸಂಘರ್ಷ ಮಹಾಮಾಯಿ ನಾಟಕದ ಕೇಂದ್ರಬಿಂದು. ತಾಯಿ ಸಾವಿಗಾಗಿ ಕಾಯುತ್ತಿದ್ದರೆ. ಸಂಜೀವ ಜೀವವನ್ನು ಉಳಿಸುವಲ್ಲಿ ಕ್ರಿಯಾಶೀಲ. ಈ ಎರಡು ಪಾತ್ರಗಳು ನಿರ್ವಹಿಸುವ ಎರಡು ಪ್ರಜ್ಞೆ   ಸಾವು ಮತ್ತು ಇರುವಿಕೆ. ಇರುವಿಕೆ ಕೇವಲ ಶುಷ್ಕವಾದುದಲ್ಲ.

ಅದು ಪ್ರೀತಿಯ ಪರಿವೇಷಿ. ಮನುಷ್ಯನ ನಿಜವಾದ ಹೋರಾಟ ಬದುಕಿಗಾಗಿಯೇ ಇದೆ. ಇದಕ್ಕೆ ಅನೇಕ ಹಂದರಗಳಿವೆ. ಅದರಲ್ಲಿ ಜೀವ ಉಳಿಸಿಕೊಳ್ಳುವುದು ಒಂದು ಬಹುಶಃ ವೈದ್ಯಕ್ಕೆ ಈ ನಾಟಕ ಮಾನವೀಯ ಸಹಜತೆಯನ್ನು ಜೋಡಿಸಿದೆ. ವೈದ್ಯಲೋಕದ ಜನ ಈ ನಾಟಕದಿಂದ ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ರೋಗಗ್ರಸ್ಥಳಾದ ರಾಜಕುಮಾರಿಯನ್ನು ನುಂಗಲು ಕಾತರರಾದ ಶೆಟವಿತಾಯಿ ರಾಜಕುಮಾರಿಯನ್ನು ಉಳಿಸಬೇಕೆಂಬ ಸಂಜೀವಶಿವರಲ್ಲಿ ನಿಜಕ್ಕೂ ಗೆಲವು ಯಾರದು? ಯಾಕಾಗಿ? ಎಂಬುದು ನಾಟಕದ ಬೆಳವಣಿಗೆ. ಸಾವಿಗೆ ಮೋಸ ಮಾಡಲೆಂದು ಬೇರೆ ಬೇರೆ ವೇಷ ಧರಿಸುವ ಮದನತಿಲಕ ಉಳಿಯ ಲಾರ. ಹೆಂಡತಿ ಭೂತವಾಗಿ ಕಾಡುವ ಕರ್ಮ ಅವನದು. ಉಳಿಯಲಾರೆ ಎನ್ನುವ ರಾಜಕುಮಾರಿಯನ್ನು ಸಂಜೀವ ಉಳಿಸುವ ಬಗೆ ನಾಟಕದ ಒಟ್ಟು ದರ್ಶನ. ಮನುಷ್ಯ ಸಾವನ್ನು ಗೆಲ್ಲಲಾಗುತ್ತದೆಯೇ? ಇಲ್ಲವೇ? ಎಂಬುದು ನಾಟಕದ ತಾರ್ಕಿಕತೆ.

ಸಾವನ್ನು ಮನುಷ್ಯ ಗೆಲ್ಲಲಾರ ಎಂಬುದು ಸತ್ಯ. ಅದು ತರ್ಕವಲ್ಲ ಆದರೂ ಪರೀತಿ ಎಂಬ ಗುಪ್ತಗಾಮಿನಿಯಾದ ಪ್ರೀತಿಗಳ ಸಂಘರ್ಷದ ಭೂಮಿಕೆಯಾಗಿ ನಾಟಕ ನಮಗೆ ಹೊಸ ಜೀವನ ಸಾಕ್ಷಾತ್ಕಾರವನ್ನು ಮಾಡಿಸುತ್ತದೆ. ತಾಯಿ ಲೋಕ ಭೀಕರ, ಪ್ರೀತಿ ಲೋಕ ಅಮರ ಆಳದಲ್ಲಿರುವ ಹೆಣ್ಣಿನ ಅಸಮಾಧಾನ ಮೀರಿ ನಾಟಕ ಸಾಗುತ್ತದೆ ತಾಯಿ ಸಾಕುವ ಹಾಗೂ ಸಾಯುವ ನೆಲಗಳಿಗೆ ಸಂಜೀವಶಿವ ತನ್ನ ವೈದ್ಯದಿಂದ ಗೆಲವು ಪ್ರೀತಿಯ ಗೆಲವಾಗುತ್ತದೆ ಗುಹೆಯೊಳಗಿನ ತಾಯಿ ಶೆಟವಿ ಪಕ್ಷಿರೂಪಿಯಾಗಿ ಸಾಮಾನ್ಯ ವೈದ್ಯ ಅಸಾಮಾನ್ಯ ವೈದ್ಯನಾಗುವ ನೆಲೆ ಸಂಜೀವಶಿವನ್ನಲಿದೆ ಎಂಬುದು ಮನಕಟ್ಟುತ್ತದೆ.ಶೆಟವಿತಾಯಿಯಾಗಿ ನಿವೇದಿತ ಬಿ., ಮದನತಿಲಕನಾಗಿ ಧೀರಜ್ ಕುಲಾಲ್, ಸಂಜೀವಶಿವನಾಗಿ ವೈಭವ್ ಸಹವಾಸಿ, ರಾಜಕುಮಾರಿಯಾಗಿ ಚೇತನಾ ಕೆ., ಮುದುಕಿಯಾಗಿ ರಾಜೇಶ್ವರಿ ಎನ್. ಸುಳ್ಯ ಅವರುಗಳು ಪಾತ್ರಗಳಿಗೆ ಜೀವ ತುಂಬಿ ಕಥೆಗೆ ಜೀವಂತಿಕೆ ನೀಡಿ ಅಭಿನಯಿಸಿದರು.

ಉಳಿದಂತೆ ಗಿರಿಮಲ್ಲಿಗೆಯಾಗಿ ಅಂಜನಾ ಹುಣಸಿಮರದ, ಮಾರ/ಸೇಡುಮಾರಿಯಾಗಿ ಹರೀಶ ಹರಕುಣಿ, ಪುಷ್ಪಗಂದಿ/ ಸೇಡುಮಾರಿಯಾಗಿ ಯಶೋಧಾ ಜಿ.ಡಿ, ಮಂಜರಿ/ಸೇಡುಮಾರಿಯಾಗಿ ಅಶ್ವೀನಿ ದೊಡ್ಡಮನಿ, ಜಿಂಕೆ, ಮದರಂಗಿ, ಸೇಡುಮಾರಿಯಾಗಿ ಶ್ವೇತಾ ಚನ್ನಳ್ಳಿ, ಶಿವನಾಗಿ ಯೋಗಿಶ್, ಮಹಾರಾಜಾನಾಗಿ ಬೀಮಗೌಡ, ನಾಟಕದ ವೇಗದ ಸಂಭಾಷಣೆ ಹಾವಭಾವಗಳಿಗೆ ತಕ್ಕಂತೆ ಅಭಿನಯಿಸಿದ್ದಲ್ಲದೆ ರಾಜೇಶ್ವರಿ ಎನ್. ಸುಳ್ಯರವರ ದಕ್ಷ ಹಾಗೂ ಉತ್ತಮ ನಿರ್ದೇಶನ ಹಾಗೂ ಪರಿಕಲ್ಪನೆಗೆ ಪರಿಕರ ಸಂಗೀತಗಳಿಂದ ನಾಟಕ ಯಶ್ಸಸ್ಸು ಪಡೆಯಿತು.
ಎರಡನೆ ದಿನದಂದು ಪ್ರದರ್ಶಿಸಿದ ಮೂಲ ತುಳು ರಚನೆಯುಳ್ಳ ಡಿ.ಕೆ. ಚೌಟ ಅವರ ಹುಲಿ ಹಿಡಿದ ಆಕಳ ನಾಟಕ ಕನ್ನಡಕ್ಕೆ ಬಾಲಕೃಷ್ಣ  ಅನುವಾದಿಸಿದ್ದು ಈ ನಾಟಕದಲ್ಲಿ ಹೆಗ್ಗಡೆಯೆನ್ನುವ ಯಜಮಾನ ತನ್ನ ಬಯಕೆಯನ್ನು ತೀರಿಸಿಕೊಳ್ಳಲು ಊರಿನಲ್ಲಿ ಬಂದತಹ ಯುವ ಚೆಲುವ ಹೆಣ್ಣುಮಕ್ಕಳನ್ನು ತನ್ನಕಡೆಗೆ ಆಕರ್ಷಣೆ ಮಾಡಿಕೊಂಡು ಅವರನ್ನು ಸಿ ಸುಖಪಡುವ ಜಾಯಮಾನವನ್ನು ಬೆಳೆಸಿಕೊಂಡು ಬಂದಿರುತ್ತಾನೆ.

ಅದೇ ರೀತಿ  ಸಹ ಆತ ತನ್ನ ತೃಷೆಯಿಂದ ಅವಳನ್ನು ಹಾಳುಮಾಡಿ ಊರಿನಿಂದ ಹೊರಹಾಕುತ್ತಾನೆ. ಕ್ರಮೇಣ ಆ ಹಗೆ ಇಟ್ಟುಕೊಂಡು ಹದಿನೆಂಟು ವರ್ಷಗಳ ನಂತರ ಸೇಡು ತಿರಿಸಿಕೊಳ್ಳಲು ತನ್ನ ಮಗಳ ಸಂಗಡ ಮತ್ತೆ ಊರಿಗೆ ಬರುತ್ತಾಳೆ ಆಗ ಹೆಗ್ಗಡೆಗೆ ಎಂಬತ್ತು ವರ್ಷ ಆಗಲು ಸಹ ಅವನು ಹಳೆಯ ಪರಂಪರೆಯನ್ನೆ ಮುಂದುವರೆಸಿಕೊಂಡು ಬಂದಿರುತ್ತಾನೆ. ಇದರ ನಡುವೆ ಪೊವಮ್ಮನ ಮಗಳಾದ ಚೆನ್ನಿಯನ್ನು ಸಹ ತನ್ನ ಕಡೆಗೆ ಆಕರ್ಷಣೆ ಮಾಡಿಕೊಂಡು ಅವಳನ್ನು ಸಹ ತನ್ನ ಸುಖದ ಸುಪತ್ತಿನಲ್ಲಿ ತೇಲಿಸುತ್ತಾನೆ. ಕೊನೆಗೆ ಅವಳೆ ತನ್ನ ಮಗಳೆಂದು ತಿಳಿದು ಪರಿತಪಿಸುವಲ್ಲಿ ಎಲ್ಲವೂ ಮುಗಿದೆ ಹೋಗಿರುತ್ತದೆ.
ಇದರಲ್ಲಿ ನಡುನಡುವೆ ಬರುವ ಭೂತಕೂಲದ ಸನ್ನಿವೇಶಗಳು ಅತ್ಯಂತ ಆಕರ್ಷಣಿಯವಾಗಿ ಚಿತ್ರಿಸಿದ ವಿನ್ಯಾಸ ನಿರ್ದೇಶನ ಪರಿಕಲ್ಪನೆ ಯನ್. ರಾಜೇಶ್ವರಿ ಎನ್. ಸುಳ್ಯ ನಾಟಕದ ಕಥಾವಸ್ತುವಿನಲ್ಲಿಯ ಅತೀ ಸೂಕ್ಷತೆಯನ್ನು ಅರ್ಥೈಸಿಕೊಂಡು ನಟ-ನಟಿಯರನ್ನು ಪಳಗಿಸಿ ಬಳಸಿದ ಪರಿ ಮೆಚ್ಚುವಂತ ಹದ್ದು. ಅಲ್ಲದೆ ಸ್ವತಃ ತಾವೇ ಯುವನಟರ ಜೊತೆ ಭೂತ ಕೋಲದ ವಿಭಿನ್ನ ಪಾತ್ರಗಳಲ್ಲಿ ನಟಿಸಿ ನಾಟಕಕ್ಕೆ ಜೀವ ತುಂಬಿದರು.
ಕಲಾವಿದರಾಗಿ ಧೀರಜ್ ಕುಲಾಲ್ .ಜಿ ಹೆಗ್ಗಡೆ ಯಜಮಾನನ ಪಾತ್ರದಲ್ಲಿ ಮಿಂಚಿ ಭಾವಪರವಶವಾಗಿ ಅಭಿನಯದಿಂದ ಗಮನಸೆಳೆದರು, ಅದರಂತೆ ಪೂವಮ್ಮಳ ಪಾತ್ರದಲ್ಲಿ ಅಂಜನಾ ಹುಣಸಿಮರದ, ಅಬ್ಬಕ್ಕಾಳಾಗಿ ನಿವೇದಿತಾ ಬಿ., ದಾಸಯ್ಯನಾಗಿ ವೈಭವ ಎನ್. ಸಹವಾಸಿ, ಚೆನ್ನಿಯಾಗಿ ಚೇತನಾ ಕೆ., ಐತಪ್ಪುನಾಗಿ ಹರೀಶ ಹರಕುಣಿ ಕೂಡಾ ತಮ್ಮ ತಮ್ಮ ಪಾತ್ರಗಳಲ್ಲಿ ತಲ್ಲೀನರಾಗಿ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು. ಇದರಲ್ಲಿ ಬರುವ ಕೊನೆಯ ಸನ್ನಿವೇಶವಂತು ಮನಕಲುಕುವ ಸನ್ನಿವೇಶದಿಂದ ಪ್ರೇಕ್ಷಕರನ್ನು ಚಿಂತೆಗೀಡು ಮಾಡುತ್ತದೆಯಲ್ಲದೆ ನೈಜ ಘಟನೆ ರಂಗದ ಮೇಲೆ ನಡೆಯುತ್ತಿದೆಯೆ ಎನ್ನುವ ಚಿತ್ರಣವನ್ನು ನೀಡುತ್ತದೆ.
ಮಹಾದೇವ ದೊಡ್ಡಮನಿಯವರು ಎರಡು ನಾಟಕದ ಉಸ್ತುವಾರಿಯಲ್ಲಿ ಹಿನ್ನಲೆಯಲ್ಲಿ ಹೆಮ್ಮರದ ಹಾಗೆ ನಿಂತು ಯುವ ಕಲಾವಿದರಿಗೆ ಸೂಕ್ತ ಸಲಹೆ ಸೂಚನೆ ಸಹಕಾರದ ಪ್ರಯತ್ನವೂ ಕೂಡಾ ಈ ಎರಡು ನಾಟಕದ ಯಶಸ್ಸಿನ ಗುಟ್ಟಿನಲ್ಲಿ ಒಂದು ಅಲ್ಲದೆ ನಾಟಕದುದ್ದಕ್ಕೂ ಕ್ಷಣಕ್ಷಣಕ್ಕೂ ಉತ್ತಮ ಸಂಗೀತ ಸಾಂಗತ್ಯವನ್ನು ನೀಡಿದ ಸುಧೀರ್ ಕುಮಾರ ಧಾಸೆ, ಡೊಲ್ಲು ಪ್ರಮೋದ.ಕೆ, ಶ್ರೀಧರ ಎಸ್. ಭಜಂತ್ರಿ ಶಹನಾಯಿ, ತಬಲಾ ಯಮನಪ್ಪ ಜಾಲಗಾರ, ಅಮೊತಾ ಆರ್, ಅನುಶ್ರೀ ಅಗಡಿ, ಲಾಲಿತ್ಯ, ವಿನೋದ ಹಾಗೂ ಆರ್, ರಂಜಿತಾ ಜಾಧವಳ ನೆರಳು ಬೆಳಕು ಎರಡು ನಾಟಕಗಳಿಗೆ ಪ್ರಸಾಧನ ಸಂತೋಷ ಮಹಾಲೆ ನೀಡಿದ್ದು ಪಾತ್ರಗಳಿಗೆ ಜೀವ ತುಂಬಿದ್ದವು.
ಸುಂದರ ರಂಗ ಸಜ್ಜಿಕೆ, ರಂಗಪರಿಕರ, ಸಂಗೀತ, ಪ್ರಸಾಧನ, ನೆರಳು ಬೆಳಕು, ಎಲ್ಲವೂ ಒಂದಕ್ಕೊಂದು ನಾಟಕಕ್ಕೆ ಪೂರಕವಾಗಿದ್ದು. ನಾಟಕದ ವೇಗಕ್ಕೆ ತಕ್ಕಂತೆ ನಾಟವನ್ನು ಯಶಸ್ಸುಗಳಿಸಿತು. ಒಟ್ಟಾರೆ ನಾಟಕದ ಕಥಾ ವಸ್ತುವಿಗೆ ಪೂರಕವಾಗುವಂತೆ ಹಾಸ್ಯದ ಜೊತೆಗೆ ಸಂದೇಶವನ್ನು ನೀಡುವ ಈ ಎರಡು ಶ್ರೇಷ್ಠ ಪ್ರಧಾನವಾದ ನಾಟಕಗಳು ಇಂದಿನ ಪ್ರಸ್ತುತ ಸಂದಂರ್ಭಕ್ಕೆ ತಕ್ಕಂತೆ ಅಭಿನಯಿಸಿ ಪ್ರೇಕ್ಷಕರ ಚಪ್ಪಾಳೆಯ ಕರಾಡತನದ ಜೊತೆಗೆ ವಿಚಾರಕ್ಕಿಡು ಮಾಡಿದ್ದಂತು ನಿಜ.
– ಸಂತೋಷ ಗಜಾನನ ಮಹಾಲೆ  ಮೊ: 9880854481 ಚಿತ್ರಗಳು: ರಾಮಚಂದ್ರ ಕುಲಕರ್ಣಿ (ಆರ್.ಕೆ)

 

► Follow us on –  Facebook / Twitter  / Google+

Facebook Comments

Sri Raghav

Admin