ಮಹಾರಾಷ್ಟ್ರದಲ್ಲಿ ಹಂದಿಜ್ವರ ಹಾವಳಿ, ಐವರು ಬಲಿ

swine-flu

ಮುಂಬೈ, ಜು.18-ಮಹಾರಾಷ್ಟ್ರದಲ್ಲಿ ಕಳೆದ ಎರಡು ವಾರಗಳ ಅವಧಿಯಲ್ಲಿ ಎಚ್1ಎನ್1 ವೈರಾಣು ಸೋಂಕಿನಿಂದ(ಹಂದಿಜ್ವರ) ಐವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಹಂದಿಜ್ವರದ ಪ್ರಕರಣ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ಮಳೆಗಾಲದಲ್ಲಿ ಈ ರೋಗ ವ್ಯಾಪಕವಾಗಿ ಉಲ್ಬಣಗೊಳ್ಳುತ್ತಿರುವುದು ಬೃಹನ್ನಗರ ಮುಂಬೈ ಪಾಲಿಕೆಗೆ ತಲೆನೋವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಎರಡು ವಾರಗಳಲ್ಲಿ 250ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಐವರು ಮೃತಪಟ್ಟಿದ್ದಾರೆ ಎಂಬುದನ್ನು ವೈದ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin