ಮಹಾರಾಷ್ಟ್ರದ ಗೊಂಡಿಯಾದಲ್ಲಿ ನದಿಗೆ ಬಿದ್ದ ಲಘು ವಿಮಾನ, ಇಬ್ಬರ ದುರ್ಮರಣ

plane-Crsh

ಮುಂಬೈ, ಏ.26-ಲಘು ವಿಮಾನವೊಂದು ನದಿಗೆ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಮಹಾರಾಷ್ಟ್ರದ ಗೊಂಡಿಯಾದಲ್ಲಿ ಸಂಭವಿಸಿದೆ. ಪುಟ್ಟ ತರಬೇತಿ ವಿಮಾನ ತಾಂತ್ರಿಕ ದೋಷದಿಂದ ನದಿಗೆ ಬಿದ್ದು ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.  ಗೋಂಡಿಯಾದಿಂದ 40 ಕಿಲೋ ಮೀಟರ್ ದೂರದಲ್ಲಿರುವ ಕಿರೋರಿ ತಹಸಿಲ್‍ನ ನದಿಯಲ್ಲಿ ಈ ದುರಂತ ಸಂಭವಿಸಿದೆ. ಹಿರಿಯ ತರಬೇತುದಾರ ರಾಜನ್‍ಗುಪ್ತ ಮತ್ತು ವಿದ್ಯಾರ್ಥಿ ಶಿವಾನಿ ಮೃತಪಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin