ಮಹಿಳಾ ಸಬ್ ಇನ್ಸ್ಪೆಕ್ಟರ್ ಜೊತೆ ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ಲವ್ವಿಡವ್ವಿ..?

Spread the love

Tipparaju-haqaldar

ಬೆಂಗಳೂರು,ಜೂ.7– ಮಹಿಳೆಯೊಬ್ಬಳ ಜೊತೆ ರಾಸಲೀಲೆ ನಡೆಸಿದ ಮಾಜಿ ಸಚಿವ ಎಚ್.ವೈ.ಮೇಟಿ ಪ್ರಕರಣ ಹಸಿ ಹಸಿಯಾಗಿರುವಾಗಲೇ ಇದೀಗ ಮತ್ತೊಬ್ಬ ಶಾಸಕನ ಕಾಮಕೇಳಿ ಪ್ರಕರಣ ಬೆಳಕಿಗೆ ಬಂದಿದೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ಮಹಿಳಾ ಸಬ್ ಇನ್ಸ್ಪೆಕ್ಟರ್ ಜೊತೆ ಲವ್ವಿ ಡವ್ವಿ ನಡೆಸಿರುವ ಪ್ರಕರಣ ಇದೀಗ ಮಾಧ್ಯಮಗಳಲ್ಲಿ ಬಹಿರಂಗಗೊಂಡಿದೆ.  ಅಂದಹಾಗೆ ಶಾಸಕ ಮತ್ತು ಮಹಿಳಾ ಸಬ್‍ಇನ್ಸ್‍ಪೆಕ್ಟರ್ ಬೇಬಿ ವಾಲಿಕಾರ್ ಅವರ ಅಕ್ರಮ ಸಂಬಂಧವನ್ನು ಬಹಿರಂಗಪಡಿಸಿದ್ದು ಬೇರ್ಯಾರೂ ಅಲ್ಲ ಅವರ ಪತ್ನಿ ಸೌಮ್ಯ. ತನ್ನ ಗಂಡನಿಂದ ತನಗೆ ಜೀವ ಬೆದರಿಕೆ ಇದ್ದು ರಕ್ಷಣೆ ಕೊಡಬೇಕು ಹಾಗೂ ಪತಿಯನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಸೌಮ್ಯ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.ಇತ್ತ ಮಾಧ್ಯಮಗಳಲ್ಲಿ ಶಾಸಕ ಮತ್ತು ಮಹಿಳಾ ಎಸ್‍ಐನ ಕಾಮಕೇಳಿ ಸುದ್ದಿ ಹೊರಬೀಳುತ್ತಿದ್ದಂತೆ ಉಲ್ಟಾ ಹೊಡೆದಿರುವ ಸೌಮ್ಯ ನಾನು ಆಯೋಗಕ್ಕೆ ದೂರೇ ನೀಡಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ನನಗೆ ದೂರು ಬಂದಿರುವುದು ನಿಜ. ಆದರೆ ಶಾಸಕರ ಪತ್ನಿ ಹೆಸರಿನಲ್ಲಿ ಪತ್ರ ಬಂದಿಲ್ಲ. ಹೀಗಾಗಿ ತನಿಖೆಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಇಡೀ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮೊದಲು ಪತಿಯ ವಿರುದ್ದ ಗಂಭೀರ ಆರೋಪ ಮಾಡಿದ್ದ ಸೌಮ್ಯ ಇದೀಗ ತಮ್ಮ ಹಾಗೂ ಪತಿ ನಡುವಿನ ಸಂಬಂಧ ಉತ್ತಮವಾಗಿದೆ. ಕೆಲವು ಕುತಂತ್ರಿಗಳು ಸಹಿಸದೆ ತಮ್ಮ ಪತಿ ತಿಪ್ಪರಾಜು ಹವಲ್ದಾರ್ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ನಮ್ಮಿಬ್ಬರ ಸಂಬಂಧ ಹಾಳು ಮಾಡಲು ಕೆಲವರು ಇದನ್ನು ರಾಜಕೀಯ ಕಾರಣಕ್ಕಾಗಿ ಬಳಸಿಕೊಂಡಿದ್ದಾರೆ. ನಾನು ಯಾವ ಆಯೋಗಕ್ಕೂ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ಪ್ರಕರಣ:

ಈ ಹಿಂದೆ ಕಳ್ಳತನ ಆರೋಪದ ಮೇಲೆ ಬಂಧಿಸಿದ್ದ ಆರೋಪಿಗಳನ್ನು ಪೊಲೀಸ್ ಠಾಣೆಯಲ್ಲೇ ಹಿಗ್ಗಾಮುಗ್ಗಾ ಹೊಡೆದು ರಾಜ್ಯಾದ್ಯಂತ ಸುದ್ದಿ ಮಾಡಿದ್ದರು ಮಹಿಳಾ ಸಬ್‍ಇನ್‍ಸ್ಪೆಕ್ಟರ್ ಬೇಬಿ ವಾಲಿಕಾರ್.  ಸದಾ ಒಂದಿಲ್ಲೊಂದು ವಿವಾದವನ್ನೇ ಸೃಷ್ಟಿಸಿಕೊಂಡಿರುವ ಬೇಬಿ ವಾಲಿಕರ್ ವರ್ಗಾವಣೆ ವಿಷಯದಲ್ಲಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರನ್ನು ಭೇಟಿಯಾಗುತ್ತಾರೆ.   2013ರಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ತಿಪ್ಪರಾಜು ಹವಾಲ್ದಾರ್ ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆಗೆ ನಿಯೋಜಿಸಬೇಕೆಂದು ಅಂದಿನ ಗೃಹಸಚಿವರಾಗಿದ್ದ ಕೆ.ಜಿ.ಜಾರ್ಜ್ ಅವರಿಗೆ ಮನವಿ ಮಾಡಿಕೊಂಡಿದ್ದರು.

ರಾಯಚೂರು ಜಿಲ್ಲೆಯಲ್ಲಿ ಪ್ರೊಬೆಷನರಿ ಹುದ್ದೆಯಲ್ಲಿದ್ದ ಬೇಬಿ ವಾಲಿಕಾರ್ ಅಲ್ಲಿಂದ ಎಪಿಎಂಸಿ ಠಾಣೆಗೆ ಎಸ್‍ಐ ಆಗಿ ವರ್ಗಾವಣೆಯಾಗುತ್ತಾರೆ. ಹೀಗೆ ಶಾಸಕರಿಗೆ ಹತ್ತಿರವಾಗುತ್ತಿದ್ದಂತೆ ಪರಸ್ಪರ ಮಾತುಕತೆ ಹೊರಳಿ, ಸಂಭಾಷಣೆ ಕೊನೆಗೆ ಇಬ್ಬರಿಗೆ ಲವ್ವಿ ಡವ್ವಿ ಆರಂಭವಾಗುತ್ತದೆ.   ಒಂದು ಹಂತದಲ್ಲಿ ಬೇಬಿ ವಾಲಿಕರ್ ತನಗೆ ಶಾಸಕರು ಆತ್ಮೀಯವಾಗಿದ್ದಾರೆ ಎಂದು ಹೇಳಿಕೊಂಡು ಠಾಣೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಕ್ಯಾರೆ ಎನ್ನುತ್ತಿರಲಿಲ್ಲ. ಈ ಬಗ್ಗೆ ಕೆಲವು ಬಾರಿ ಸಂಬಂಧಪಟ್ಟವರು ಎಸ್ಪಿಗೆ ದೂರು ನೀಡಿದ್ದರು ಎನ್ನಲಾಗಿದೆ.

ಶಾಸಕ ಹಾಗೂ ವಾಲಿಕಾರ್ ನಡುವಿನ ಸಂಬಂಧ ಯಾವ ಹಂತ ತಲುಪಿತು ಎಂದರೆ ಅವರ ಪತ್ನಿ ಸೌಮ್ಯ ಹಾಗೂ ಮಕ್ಕಳು ಮನೆಯಲ್ಲಿ ಇಲ್ಲದ ವೇಳೆ ಇಬ್ಬರು ಸೇರುತ್ತಿದ್ದರು ಎಂದು ಅಕ್ಕಪಕ್ಕದವರೇ ಮಾತನಾಡಿಕೊಳ್ಳುತ್ತಿದ್ದಾರೆ.   ಶಾಸಕರ ವರ್ತನೆಗಳು ಬದಲಾದಾಗ ಅನುಮಾನಗೊಂಡ ಪತ್ನಿ ಒಂದು ಬಾರಿ ಇದ್ದಕ್ಕಿದ್ದಂತೆ ಮನೆಗೆ ಬಂದಾಗ ಇಬ್ಬರು ಸಿಕ್ಕಿ ಹಾಕಿಕೊಂಡಿದ್ದರು.

ಆಯೋಗಕ್ಕೆ ದೂರು:

ಯಾವಾಗ ಶಾಸಕ ಪತ್ನಿಯಿಂದ ದೂರವಾಗಿ ಹಲ್ಲೆ , ದೌರ್ಜನ್ಯ ಅಂತಹ ಪ್ರಕರಣಗಳು ಹೆಚ್ಚಾದವೋ ಸೌಮ್ಯ ಇಬ್ಬರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ ದೂರಿನ ಪತ್ರದಲ್ಲಿ ವಿಳಾಸ ನೀಡದಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.


ಮಾತು ಬದಲಾಯಿಸಿದ ಪತ್ನಿ :

ಇದೀಗ ಮಾಧ್ಯಮಗಳಲ್ಲಿ ಶಾಸಕನ ಕಾಮಕೇಳಿ ಬಹಿರಂಗಗೊಳ್ಳುತ್ತಿದ್ದಂತೆ ಪತ್ನಿ ಪತಿಯ ರಕ್ಷಣೆಗೆ ಧಾವಿಸಿದ್ದಾರೆ. ನನ್ನ ಪತಿ ಶ್ರೀ ರಾಮನಂತೆ, ಅವರ ರಾಜಕೀಯ ಏಳಿಗೆಯನ್ನು ಸಹಿಸದೆ ಕೆಲವು ಇಂತಹ ಹೀನಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.  ಇದರ ಹಿಂದೆ ಯಾರಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಸೌಮ್ಯ ಹೇಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ತಿಪ್ಪರಾಜು ಹವಾಲ್ದಾರ್ ಯಾರು:

ಅಂದಹಾಗೆ ತಿಪ್ಪರಾಜ್ ಹವಾಲ್ದಾರ್ ಒಂದು ಕಾಲದಲ್ಲಿ ಶಾಲಾ ಶಿಕ್ಷಕನಾಗಿದ್ದ. ಸದಾ ರಾಜಕಾರಣಿಗಳ ಹಿಂದೆ ಸುತ್ತಾಡುವುದೇ ಇವನ ಕಾಯಕವಾಗಿತ್ತು. ಹಾಲಿ ದೇವದುರ್ಗ ಶಾಸಕ ರಾಜುಗೌಡ ನಾಯಕ್ ಶಾಸಕರಾದ ವೇಳೆ ಆಪ್ತ ಸಹಾಯಕನಾಗಿದ್ದ.   ಶಿಕ್ಷಕರನ್ನು ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳಬಾರದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬಳಿಕ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ವಿಜೇತನಾಗಿದ್ದ. ಹೀಗೆ ಹೀಗೆ ಹಂತ ಹಂತವಾಗಿ ರಾಜಕೀಯವಾಗಿ ಮೇಲೆ ಬರುತ್ತಿದ್ದಂತೆ ಶಿವನಗೌಡ ನಾಯಕ್ ಅವರ ಬೆಂಬಲದಿಂದ ಟಿಕೆಟ್ ಗಿಟ್ಟಿಸಿ 2013ರ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಗ್ರಾಮೀಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದರು.

ಇನ್ನು ಆರೋಪಕ್ಕೆ ಸಿಲುಕಿರುವ ಮಹಿಳಾ ಸಬ್‍ಇನ್‍ಸ್ಪೆಕ್ಟರ್ ಬೇಬಿ ವಾಲಿಕಾರ್ ಕೂಡ ಆಗಾಗ್ಗೆ ವಿವಾದಗಳಿಗೆ ಸಿಲುಕುತ್ತಲೇ ಇದ್ದಾರೆ.  ರಾಯಚೂರು ಎಪಿಎಂಸಿ ಠಾಣೆಯಲ್ಲಿ ಆರೋಪಿಗಳನ್ನು ಬಂಧಿಸಿ ಠಾಣೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದರು. ಬಳಿಕ ಅಲ್ಲಿಂದ ಅವರನ್ನು ಕೆಇಬಿ ಜಾಗೃತ ದಳಕ್ಕೆ ವರ್ಗಾವಣೆ ಮಾಡಲಾಗಿತ್ತು. ನಂತರ ಶಾಸಕರ ಬೆಂಬಲದಿಂದ ದೊಡ್ಡಬಳ್ಳಾಪುರದ ವಿಶ್ವನಾಥಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಆದರೆ ಇಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸದೆ ಲಂಚ ಪಡೆದಿದ್ದಾರೆ ಎಂಬ ಆರೋಪವಿತ್ತು. ಹೀಗಾಗಿ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin