ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು

8

ಬೆಳಗಾವಿ,ಫೆ.25- ಭೂಮಿಯ ಮೇಲಿನ ನಕ್ಷತ್ರಗಳಾಗಿರುವ ಬುದ್ಧ ಬಸವ ಅಂಬೇಡ್ಕರ್ ಅವರ ತತ್ವ, ಆದರ್ಶಗಳನ್ನು ಪಾಲನೆ ಮಾಡುತ್ತಾ ಸಂಘಟಿತರಾಗುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಹೇಳಿದರು. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದಲ್ಲಿ ಬುದ್ಧ ಬಸವ ಅಂಬೇಡ್ಕರ್ ಜನಜಾಗೃತಿ ಕೇಂದ್ರದ ಮಹಿಳಾ ಶಾಖೆಯನ್ನು ಬುದ್ದ ಬಸವ ಅಂಬೇಡ್ಕರ್ ಜನಜಾಗೃತಿ ಕೇಂದ್ರದ ಜಿಲ್ಲಾ ಉಪಾಧ್ಯಕ್ಷರು ಮತ್ತು ಜಿಲ್ಲಾ ಗ್ರಾಮೀಣ ಕಾಂಗ್ರೇಸ್ ಪ.ಜಾತಿ ಸಮಿತಿ ಜಿಲ್ಲಾಧ್ಯಕ್ಷ ಸುರೇಶ ಜಿ ತಳವಾರ ಉದ್ಘಾಟಿಸಿ ಮಾತನಾಡಿದರು.

ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ರೀತಿಯಿಂದ ಸಬಲರಾಗಿ ಆದರ್ಶಮಯ ಜೀವನ ನಡೆಸಬೇಕು ಎಂದರು.
ಗ್ರಾಮ ಪಂಚಾಯತಿ ಸದಸ್ಯ ಪವನ ಪಾಟೀಲ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಸಂಘಟನೆಗೆ ನನ್ನ ಮತ್ತು ಗ್ರಾಮ ಪಂಚಾಯತಿಯ ಸಹಕಾರವಿದೆ ಎಂದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ವಿಕ್ರಮ ಕರನಿಂಗ, ಗ್ರಾಮ ಪಂಚಾಯತಿ, ಪಿಡಿಓ, ಪಿ. ವಾಸುದೇವ, ಗ್ರಾಮ ಪಂಚಾಯತಿ ಸದಸ್ಯರಾದ ದುರದುಂಡಿ ಉಗಾರ, ಹಿರಿಯರಾದ ಕಲ್ಲಪ್ಪಾ ಬೆಟಗೇರಿ, ಅಣ್ಣಾಸಾಹೇಬ ಪಾಟೀಲ, ರವಿ ಜಾಡರ, ಮಂಜುನಾಥ ಮರಡಿ, ಶಂಕರ ತಿಪ್ಪನಾಯ್ಕ ಬಾಳಾಸಾಹೇಬ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin