ಮಾಂಗಲ್ಯಸೂತ್ರವನ್ನೇ ಮಾರಿ ಶೌಚಾಲಯ ಕಟ್ಟಿಸಿ ಮಾದರಿಯಾದ ಮಹಿಳೆ
ಕಾನ್ಪುರ, ಅ.14- ಗೃಹಿಣಿಯೊಬ್ಬರು ತಮ್ಮ ಮಾಂಗಲ್ಯಸೂತ್ರವನ್ನೇ ಮಾರಾಟ ಮಾಡಿ ಶೌಚಾಲಯ ಕಟ್ಟಿಸುವ ಮೂಲಕ ಮಾದರಿಯಾಗಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ್ ನಿವಾಸಿ ಲತಾದೇವಿ ದಿವಾರ್ಕ ತಮ್ಮ ಮಾಂಗಲ್ಯಸೂತ್ರ ಮಾರಿ ಶೌಚಾಲಯ ಕಟ್ಟಿಸಿದ ಗೃಹಿಣಿ. ತಮ್ಮ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಕುಟುಂಬಸ್ಥರು ಬಹಿರ್ದೆಸೆಗೆ ಹೋಗಲು ಮುಜುಗರ ಪಡುತ್ತಿದ್ದರು. ಶೌಚಕ್ಕಾಗಿ ಹೊರ ಹೋಗುವುದರಿಂದ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಲತಾದೇವಿ ಮಾಂಗಲ್ಯಸೂತ್ರಕ್ಕಿಂತ ಮನೆಯಲ್ಲಿ ಶೌಚಾಲಯವೇ ಮುಖ್ಯ ಎಂದು ನಿರ್ಧರಿಸಿ ತಾಳಿ ಮಾರಿದ್ದಾರೆ.
ಮನೆಯಲ್ಲಿ ಶೌಚಾಲಯ ನಿರ್ಮಿಸಲು ಪ್ರಧಾನಿ ಮೋದಿಯವರ ಸ್ವಚ್ಛ ಭಾರತ್ ಅಭಿಯಾನ ಪ್ರಭಾವ ಎನ್ನುವ ಲತಾದೇವಿ, ಆಭರಣಕ್ಕಿಂತ ಮೂಲಭೂತ ಅವಶ್ಯಕತೆಯಾದ ಶೌಚಾಲಯ ಮುಖ್ಯ. ಹೀಗಾಗಿ ಮಾಂಗಲ್ಯಸೂತ್ರ ಮಾರಿ ಮನೆಯಲ್ಲಿ ಶೌಚಾಲಯ ಕಟ್ಟಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
► Follow us on – Facebook / Twitter / Google+
Facebook Comments