ಮಾಜಿ ಶಾಸಕ ಕಿರಣ್ಕುಮಾರ್ಗೆ ಜಾಮೀನು
ಹುಳಿಯಾರು, ಮಾ.12- ಮೂವರು ಅಮಾಯಕ ಮಕ್ಕಳ ಬಲಿ ತೆಗೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್ಕುಮಾರ್ ಹಾಗೂ ಕವಿತಾ ಕಿರಣ್ಕುಮಾರ್ರನ್ನು ತಿಪಟೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅನುಮತಿ ಇಲ್ಲದೆ ಹಾಸ್ಟೆಲ್ ನಡೆಸಿ ಸಮರ್ಪಕ ಮೇಲುಸ್ತುವಾರಿ ಇಲ್ಲದೆ ಮೂವರು ಮಕ್ಕಳ ಸಾವಿಗೆ ಕಾರಣವಾದ ಘಟನೆ ಹಿನ್ನೆಲೆಯಲ್ಲಿ ಈ ಇಬ್ಬರು ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ರಾತ್ರಿ 1 ಗಂಟೆಯಲ್ಲಿ ತಿಪಟೂರು ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >