ಮಾಜಿ ಸಚಿವ ಬಾಬುರಾವ್ ಚಿಂಚನಸೂರ್‍ಗೆ ಸಮನ್ಸ್

Baburoa-Chinchanasur

ಬೆಂಗಳೂರು, ನ.30- ಹನ್ನೆರಡು ಕೋಟಿ ರೂ.ಗಳ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಬಾಂಬುರಾವ್ ಚಿಂಚನಸೂರ್ ಅವರಿಗೆ 15ನೆ ಎಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ ಖುದ್ದು ಹಾಜರಾತಿಗೆ ಆದೇಶ ನೀಡಿದೆ. ಬೆಂಗಳೂರಿನ ನಾಗರಬಾವಿಯ ನಿವಾಸಿ ಅಂಜನಾ ಎಂಬುವರಿಂದ 12 ಕೋಟಿ ರೂ.ಗಳನ್ನು ಪಡೆದು ನಂತರ ಅದನ್ನು ಹಿಂತಿರುಗಿಸದೆ ವಂಚಿಸಿ ನಂತರ ಚೆಕ್ ನೀಡಲಾಗಿತ್ತು. ಅದು ಬೌನ್ಸ್ ಆದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಸಚಿವರಾಗಿದ್ದಾಗಲೇ ಅವರ ಮೇಲೆ ಈ ಆರೋಪ ಕೇಳಿ ಬಂದಿತ್ತು. ಆಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಎಲ್ಲವನ್ನೂ ಸರಿ ಮಾಡಿಕೊಳ್ಳುತ್ತೇವೆ. ನ್ಯಾಯಾಲಯದಿಂದಲೇ ಪರಿಹಾರ ಕಂಡು ಕೊಳ್ಳುತ್ತೇನೆ ಎಂದು ಬಾಬುರಾವ್ ಚಿಂಚನಸೂರ್ ಹೇಳಿದ್ದರು.

ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ನ.30ರಂದು ಖುದ್ದು ಹಾಜರಾಗಬೇಕೆಂದು ಬಾಬುರಾವ್ ಅವರಿಗೆ ಸೂಚನೆ ನೀಡಿದೆ. ಕಳೆದ ನ.19ರಂದು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಚಿಂಚನಸೂರ್ ಪರ ವಕೀಲರು ಕಾಲಾವಕಾಶ ಕೋರಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin