ಮಾಧ್ಯಮಗಳೇ ಅಮೆರಿಕನ್ನರ ಪರಮವೈರಿಗಳು ಎಂದ ಟ್ರಂಪ್

Trump-01

ವಾಷಿಂಗ್ಟನ್,ಫೆ.18-ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳ ವಿರುದ್ದದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಮಾಧ್ಯಮಗಳೇ ಅಮೆರಿಕ ಪ್ರಜೆಗಳ ಬದ್ಧ ವೈರಿಗಳಾಗಿವೆ ಎಂದು ಬಣ್ಣಿಸಿದ್ದಾರೆ.   ಕೆಲವು ಟಿವಿ ವಾಹನಿಗಳು ಮತ್ತು ಪತ್ರಿಕೆಗಳ ಹೆಸರುಗಳನ್ನು ಉಲ್ಲೇಖಿಸಿ ಮಾತನಾಡಿರುವ ಟ್ರಂಪ್, ಇವು ನನ್ನ ಶತ್ರುಗಳಲ್ಲ. ಆದರೆ ಅಮೆರಿಕ ಜನತೆಯ ಶತ್ರುಗಳು ಎಂದು ಹೇಳಿದ್ದಾರೆ.   ನನ್ನ ಅಧ್ಯಕ್ಷತೆಯಲ್ಲಿ ಆಡಳಿತ ಯಂತ್ರ ಅತ್ಯಂತ ಸುಗಮವಾಗಿ ನಡೆಯುತ್ತಿದೆ. ಯಾವುದೇ ಗೊಂದಲಗಳು, ಪ್ರತಿರೋಧಗಳು, ವಿರೋಧಬಾಸಗಳು ಇಲ್ಲ. ಶ್ವೇತಭವನದಲ್ಲಿ ಎಲ್ಲವೂ ಸಹಜವಾಗಿಯೇ ಇದೆ. ಆದರೆ ಈ ಮಾಧ್ಯಮಗಳು ವ್ಯತಿರಿಕ್ತ ರೀತಿಯಲ್ಲಿ ಬಿಂಬಿಸುತ್ತವೆ ಎಂದು ಕಿಡಿಕಾರಿದ್ದಾರೆ.

ಅಮೆರಿಕದ ಶಕ್ತಿಕೇಂದ್ರ ಶ್ವೇತಭವನದಲ್ಲಿ ಎಲ್ಲವೂ ಸರಿಯಾಗಿಲ್ಲ. ಆಡಳಿತ ಯಂತ್ರ ಹದಗೆಟ್ಟಿದೆ ಎಂಬಂತೆ ಮಾಧ್ಯಮಗಳು ವರ್ಣಿಸುತ್ತಿವೆ ಎಂದು 70 ವರ್ಷದ ವರ್ಣರಂಜಿತ ಅಧ್ಯಕ್ಷ ಟ್ರಂಪ್ ದಿನಪತ್ರಿಕೆ ಮತ್ತು ಟಿವಿ ವಾಹಿನಿಗಳ ವಿರುದ್ದ ಹರಿಹಾಯ್ದರು.   ಅಮೆರಿಕದ ಜನತೆ ನನ್ನ ಆಡಳಿತದ ಬಗ್ಗೆ ತೃಪ್ತಿಯಿಂದಿದ್ದಾರೆ. ಜ.20ರಂದು ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಜನತೆಗೆ ನೆಮ್ಮದಿಯಾದ ಆಡಳಿತ ನೀಡಿದ್ದೇನೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin