ಮಾಧ್ಯಮದವರನ್ನು ಹೊರಗಿಟ್ಟು ಬಿಜೆಪಿ ಕಾರ್ಯಕಾರಿಣಿ

Spread the love

BJP-Executive--01

ಬೆಂಗಳೂರು, ಮೇ 7– ಮೈಸೂರಿನಲ್ಲಿ ನಡೆಯುತ್ತಿರುವ ಎರಡನೆ ದಿನದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ನಿನ್ನೆ ಕಾರ್ಯಕಾರಿಣಿಯ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಅವಕಾಶ ಕಲ್ಪಿಸಿದ್ದ ಪಕ್ಷ ಎಲ್ಲ ಮಾಧ್ಯಮಗಳಲ್ಲಿ ಭಿನ್ನಮತೀಯ ಚಟುವಟಿಕೆಗಳ ವಿಷಯಗಳೇ ಪ್ರಧಾನವಾಗಿ ಪ್ರಸಾರವಾಗುತ್ತಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಇಂದು ಮಾಧ್ಯಮಗಳನ್ನು ಕಾರ್ಯಕಾರಿಣಿ ನಡೆಯುತ್ತಿರುವ ಸ್ಥಳದಿಂದ ತೆರವುಗೊಳಿಸಲಾಯಿತು. ಕೇವಲ ಗೋಷ್ಠಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಇಂದು ಬೆಳಗ್ಗೆ ಕಾರ್ಯಕಾರಿಣಿ ಸಭೆಗೆ ಆಹ್ವಾನವಿರುವವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.ಸುದ್ದಿ ಮಾಧ್ಯಮದವರಿಗೆ ನಿರ್ಬಂಧ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ಯಾರನ್ನೂ ಒಳಗೆ ಬಿಟ್ಟಿಲ್ಲ.  ಬಿಜೆಪಿಯಲ್ಲಿ ಭಾರೀ ವಿದ್ಯಮಾನಗಳು ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದವು. ರಾಯಣ್ಣ ಬ್ರಿಗೇಡ್‍ನ ಮುಖ್ಯಸ್ಥರಾದ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ನಡುವೆ ಭಿನ್ನಮತ ಉಲ್ಬಣಗೊಂಡಿತ್ತು. ಕಾರ್ಯಕಾರಿಣಿಯಲ್ಲಿ ಇವೆಲ್ಲವನ್ನೂ ಮರೆತು ಒಗ್ಗಟ್ಟಿನ ಸಂದೇಶ ಸಾರಲಿದ್ದಾರೆ ಎಂಬ ನಿರೀಕ್ಷೆಯಿತ್ತು. ಆದರೆ, ಈ ಎಲ್ಲವೂ ಹುಸಿಯಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಭಿನ್ನಮತೀಯ ಚಟುವಟಿಕೆಗಳ ಸುದ್ದಿಗಳೇ ಪ್ರಧಾನವಾಗಿ ಬರಲು ಪ್ರಾರಂಭಿಸಿದವು. ದಿನವಿಡೀ ಕಾರ್ಯಕಾರಿಣಿಯಲ್ಲಿ ನಡೆದ ಭಾಷಣಗಳು, ಮಂಡಿಸಿದ ನಿರ್ಣಯಗಳಿಗಿಂತ ಯಡಿಯೂರಪ್ಪ, ಈಶ್ವರಪ್ಪ ನಡುವಿನ ಭಿನ್ನಮತ, ಪರಸ್ಪರ ಮುಖ ನೋಡದ ಸನ್ನಿವೇಶ, ಈಶ್ವರಪ್ಪನವರ ಏಕಾಂಗಿತನ ಮುಂತಾದ ವಿಷಯಗಳು ಯಾವಾಗ ಪ್ರಚಾರಗೊಂಡವೋ ಕೂಡಲೇ ಎರಡನೆ ದಿನದ ಕಾರ್ಯಕಾರಿಣಿಯಿಂದ ಮಾಧ್ಯಮಗಳನ್ನು ನಿರ್ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin