ಮಾನವ ಹಕ್ಕು ಶಿಕ್ಷಣ ಎಲ್ಲರಿಗೂ ದೊರೆಯುವಂತಾಗಬೇಕು : ಡಾ. ರೊಟ್ಟಿ
ಬೆಳಗಾವಿ,ಸೆ.30- ಮಾನವ ಹಕ್ಕು ಮಾಹಿತಿ ಮತ್ತು ಶಿಕ್ಷಣ ಎಲ್ಲರಿಗೂ ದೊರೆಯುವಂತಾಗಬೇಕು. ಎಲ್ಲ ಶಾಲಾ ಕಾಲೇಜಗಳ ಪಠ್ಯಕ್ರಮದಲ್ಲಿ ಈ ವಿಷಯವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಮಿತಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎ.ಆರ್. ರೊಟ್ಟಿ ಕರೆ ನೀಡಿದರು. ಮರಾಠಾ ಮಂಡಳ ಕಾಲೇಜಿನ ಸಭಾಭವನದಲ್ಲಿ ನಿನ್ನೆ ಮರಾಠಾ ಮಂಡಳ ಮಹಾವಿದ್ಯಾಲಯ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರೊ. ಲತಾ ಸರದಾರ ಮಾತನಾಡಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಾಯ ಶೋಷಣೆ ಎಲ್ಲ ಕ್ಷೇತ್ರಗಳಲ್ಲಿ ಆಗುತ್ತಿದ್ದು ಇದರ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ಇಲ್ಲದ್ದು ವಿಷಾದನೀಯ ಎಂದರು.
ಡಾ. ಎ.ಬಿ. ಪವಾರ ಅಧ್ಯಕ್ಷ ಮಾತುಗಳನ್ನಾಡಿದರು. ಪ್ರೊ. ಎಸ್.ಜಿ. ಸೊನ್ನದ, ಪ್ರೊ. ಪಟ್ಟಣ, ಸಮಾವೇಶದ ಕಾರ್ಯಕಾರಿ ಸಂಚಾಲಕರು ಪ್ರೊ ರೀ. ವಿಜಯಲಕ್ಷ್ಮೀ ತಿರ್ಲಾಪೂರ, ಸಂಚಾಲಕ ಡಾ. ಎಸ್.ಬಿ. ದಾಸೋಗ ಉಪಸ್ಥಿತರಿದ್ದರು.ಈ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸುಭಾಸ ಪಾಟೀಲ, ಡಾ. ಸುಮಂತ ಹಿರೇಮಠ, ಪ್ರೊ. ಎಚ್.ಬಿ. ವೆಂಕಟೇಶಪ್ಪಾ, ಗೀತಾ ಪವಾರ 2ನೇ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಪ್ರೊ. ರೇಖಾ ಬಾವಡೇಕೆರ, ಪ್ರೊ. ಆರ್.ಎಮ್. ತೇಲಿ, ಪ್ರೊ. ಜಿ.ಎಮ್. ಕರ್ಕಿ, ಪ್ರೊ. ಎ.ಎ. ಮುತಗೇಕರ, ಪ್ರೊರೀ. ಜಿ.ವೈ. ಬೆನ್ನಳ್ಳಕರ ಈ ಗೋಷ್ಠಿ ನಡೆಸಿಕೊಟ್ಟರು.ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ವಿನಿತಾ ಸೊಂಡೂರ, ಪ್ರೊರೀ. ಜೆ.ಬಿ. ಅಂಚಿ, ಡಾ. ನೌಶಾದ ರಾಂಪುರ, ಪ್ರೊ. ಎಸ್.ಎಸ್. ಚವ್ಹಾಣ, ಪ್ರೊರೀ. ಕೆ.ಜಿ. ಹೊಸಕೋಟಿ, ಪ್ರೊರೀ. ಆರ್.ಎ. ದುಮಾವತ ಇತರೇ ಕಾಲೇಜುಇನ ವಿದ್ಯಾರ್ಥಿಗಳು ಬಹುದೊಡ್ಡ ಸಂಖ್ಯೆಯಲ್ಲಿ ಪ್ರಬಂಧ ಮನ್ನಣೆ ಮಾಡಿದರು ಹಾಗೂ ಶಾಲಾ ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು.
► Follow us on – Facebook / Twitter / Google+