ಮಾನಸಿಕ ಅಸ್ವಸ್ಥ ತಾಯಿ ಜೊತೆ ಬಾವಿಗೆ ಹಾರಿ ಮಗ ಆತ್ಮಹತ್ಯೆ

Suicide

ರಾಯಚೂರು, ಏ.2- ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಮಾನಸಿಕ ಅಸ್ವಸ್ಥ ತಾಯಿ ಹಾಗೂ ದಿವ್ಯಾಂಗ ಮಗ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುರವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಸಿಂಧನೂರಿನ ಕಲಮಂಗಿ ಗ್ರಾಮದ ಈರಮ್ಮ(60) ಮತ್ತು ಭೀಮನಗೌಡ (30) ಆತ್ಮಹತ್ಯೆ ಮಾಡಿಕೊಂಡವರು. ದಿವ್ಯಾಂಗದಿಂದ ಬಳಲುತ್ತಿದ್ದ ಮಗನನ್ನು ಮಾನಸಿಕ ಅಸ್ವಸ್ಥೆಯಾಗಿದ್ದ ತಾಯಿಯೇ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.  ಈ ನಡುವೆ ಏನಾಯಿತೋ ಏನೋ ಗೊತ್ತಿಲ್ಲ ಬೆಳಗಾಗುವಷ್ಟರಲ್ಲಿ ತಾಯಿ-ಮಗ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಬಾವಿಯಿಂದ ಶವಗಳನ್ನು ಮೇಲೆತ್ತಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Sri Raghav

Admin