ಮಾರ್ಚ್ 17ರ ಬದಲು ಏಪ್ರಿಲ್ 7ರಂದು ತೆರೆಕಾಣಲಿದೆ ‘ಸರ್ಕಾರ್-3’

Spread the love

Sarkar--01

ಬಾಲಿವುಡ್ ಸೂಪರ್‍ಸ್ಟಾರ್ ಅಮಿತಾಭ್ ಬಚ್ಚನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸರ್ಕಾರ್-3 ಮಾರ್ಚ್ 17ರ ಬದಲು ಏಪ್ರಿಲ್ 7ರಂದು ತೆರೆಕಾಣಲಿದೆ.  ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಬದುಕಿನ ಘಟನಾವಳಿಗಳಿಂದ ಪ್ರೇರಿತವಾದ ಈ ಸಿನಿಮಾದಲ್ಲಿ ಸುಭಾಷ್ ನಾಗ್ರೆ (ಸರ್ಕಾರ್) ಪಾತ್ರದಲ್ಲಿ ಬಿಗ್-ಬಿ ಮಿಂಚಿದ್ದಾರೆ. ರಾಮ್‍ಗೋಪಾಲ್ ವರ್ಮ ನಿರ್ದೇಶನದ ಸರ್ಕಾರ್ ಸರಣಿಯ ಮೂರನೇ ಸಿಕ್ವೇಲ್ ಇದಾಗಿದೆ. 2005ರಲ್ಲಿ ಸರ್ಕಾರ್ ಸಿನಿಮಾ ತೆರೆಕಂಡಿತ್ತು. ಅಮಿತಾಭ್ ಮತ್ತು ಅಭಿಷೇಕ್ ಬಚ್ಚನ್ ತಂದೆ-ಮಗ ಪಾತ್ರದಲ್ಲಿ ಗಮನಸೆಳೆದಿದ್ದರು. ಮುಂಬೈ ಪಾತಕಿ ಲೋಕ ಮತ್ತು ರಾಜಕಾರಣದ ಸುತ್ತ ಹೆಣೆದ ಈ ಸಿನಿಮಾ ಯಶಸ್ಸು ಕಂಡಿತ್ತು.

2008ರಲ್ಲಿ ಸರ್ಕಾರ್ ರಾಜ್ ಹೆಸರಿನಲ್ಲಿ ಎರಡನೇ ಭಾಗ ಬಿಡುಗಡೆಯಾಗಿತ್ತು. ಆರ್‍ಜಿವಿಗೂ ಮತ್ತು ಅವರ ನಿರ್ದೇಶನದ ಸಿನಿಮಾಗಳಿಗೂ ವಿವಾದ ನಂಟಿದೆ. ಇದು ಸರ್ಕಾರ್‍ಗೂ ಹೊರತಾಗಿರಲಿಲ್ಲ. ಮೊದಲ ಎರಡು ಸರಣಿಗಳು ಕಾಂಟ್ರೋವರ್ಸಿಗೆ ಕಾರಣವಾಗಿದ್ದವು. ಮನೋಜ್ ಬಾಜಪೇಯಿ, ಜಾಕೀ   ಶ್ರಾಫ್, ಯಾಮಿ ಗೌತಮ್, ರೋನಿತ್ ರಾಯ್, ಪರಾಗ್ ತ್ಯಾಗಿ, ರೋಹಿಣಿ ಹಟ್ಟಂಗಡಿ ಪಾತ್ರವರ್ಗದಲ್ಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin