ಮಾಲೂರಲ್ಲಿ ಲಕ್ಷಾಂತರ ಬೆಲೆಯ ಗ್ರಾನೈಟ್ ವಶ
ಕೋಲಾರ, ನ.15-ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿನ್ನೆ ಮಧ್ಯರಾತ್ರಿ ಮಾಲೂರು ಪಟ್ಟಣದಲ್ಲಿ ದಾಳಿ ನಡೆಸಿ ಲಕ್ಷಾಂತರ ರೂ. ಬೆಲೆಬಾಳುವ ಮೂರು ಲಾರಿ, ಅಲಂಕಾರಿಕ ಶಿಲೆಗಳನ್ನು (ಗ್ರಾನೈಟ್)ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಿನ್ನೆ ಮಧ್ಯರಾತ್ರಿ ಹಿರಿಯ ಭೂವಿಜ್ಞಾನಿ ನಂಜುಂಡ ಸ್ವಾಮಿ, ಭೂವಿಜ್ಞಾನಿ ವಿಶ್ವನಾಥ್, ಅಧಿಕಾರಿಗಳಾದ ಕೃಷ್ಣಪ್ಪ, ಸುಚೇತ್ ಮತ್ತು ಗೃಹ ರಕ್ಷಕ ದಳದವರು ದಾಳಿ ನಡೆಸಿ 3 ಲಾರಿಗಳಲ್ಲಿ ಸಾಗಿಸುತ್ತಿದ್ದ ಗ್ರಾನೈಟ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಕೋಲಾರ ತಾಲೂಕಿನ ಹೈವೇ ನರಸಾಪುರ ಚೆಕ್ಪೋಸ್ಟ್ ಬಳಿ ದಾಳಿ ನಡೆಸಿದ ಇದೇ ತಂಡ ನಾಲ್ಕು ಲೋಡ್ ಫಿಲ್ಟರ್ ಮರಳು ವಶಪಡಿಸಿಕೊಂಡಿದ್ದಾರೆ. ವೇಮಗಲ್ ಠಾಣೆ ಈ ಸಂಬಂಧ ಪ್ರಕರಣ ದಾಖಲಾಗಿದೆ.