ಮಾಸ್ಟರ್ ಕಿಶನ್ ಮತ್ತೊಂದು ಹೆಜ್ಜೆ

belagam------

ಚಿತ್ರರಂಗದಲ್ಲಿ ಬಾಲನಟನಾಗಿ ಪ್ರವೇಶ ಪಡೆದು ಹಲವಾರು ಸಾಧನೆಗಳನ್ನು ಮಾಡುವ ಮೂಲಕ ದಾಖಲೆ ಹಾದಿಯನ್ನು ತುಳಿದಂತಹ ಮಾಸ್ಟರ್ ಕಿಶನ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈಗ ಇವರು ವಿನ್‍ಫಾರ್‍ಮಕ್ಸ್ ಸಂಸ್ಥೆಯ ತಂತ್ರಜ್ಞಾನದ ಮುಖಂಡರಾಗಿ ನೇಮಕಗೊಂಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳು ಇಲ್ಲಿಯವರೆಗೆ 2ಡಿಯಲ್ಲಿ ವಿಷಯಗಳನ್ನು ನೋಡಿಕೊಳ್ಳುತ್ತಿದ್ದರು. ತಂತ್ರಜ್ಞಾನ ಮುಂದುವರೆದಂತೆ ಈಗ 3ಡಿ ಸ್ಟಿರಿಯೋಗ್ರಾಫಿ ಮತ್ತು ಗ್ರಾಫಿಕ್ಸ್ ಪ್ರಬಲತೆಯನ್ನೊಳಗೊಂಡ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯಕ್ರಮ

ಆಧಾರಿತ ರೂಪದಲ್ಲಿ ನೀಡಲು ಲಂಡನ್‍ನಲ್ಲಿರುವ ವಿನ್‍ಫಾರ್‍ಮಕ್ಸ್ ಎನ್ನುವ ಸಂಸ್ಥೆಯೊಂದು ಪ್ರಪಂಚದಾದ್ಯಂತ ಶಾಖೆಯನ್ನು ಹೊಂದಿದ್ದು ಪ್ರಸಕ್ತ ಸಿಲಿಕಾನ್ ಸಿಟಿಯಲ್ಲಿ ಶಾಖೆಯನ್ನು ತೆರೆದಿದೆ. ಇದರಲ್ಲಿ ಹತ್ತು ಬಗೆಯ ಉತ್ಪಾದನೆಗಳು ಮತ್ತು ಸೇವೆಗಳನ್ನು ಬಳಸಿಕೊಳ್ಳಬಹುದು. ಕೇಂದ್ರ ಸಚಿವ ಸದಾನಂದಗೌಡ, ಆಹಾರ ನಾಗರೀಕ ಸಚಿವ ಯು.ಟಿ.ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‍ಪ್ರಕಾಶ್ ರುದ್ರಪ್ಪಪಾಟೀಲ್ ಹಾಗೂ ಟಿಡಿಪಿ ಶಾಸಕಿ ಸತ್ಯಪ್ರಭಾ ಆದಿಕೇಶವಲು ಶಾಖೆಗೆ ಚಾಲನೆ ನೀಡಿ ಶುಭ ಹಾರೈಸಿದರು.

 

 

► Follow us on –  Facebook / Twitter  / Google+

 

Sri Raghav

Admin