ಮಾಸ್ತಿಗುಡಿ ಮಾತು

Spread the love

mastigudi
ಆರಂಭದಿಂದಲೂ ಸುದ್ದಿ ಮಾಡುತ್ತಲೇ ಬಂದಂಥ ಮಾಸ್ತಿಗುಡಿ ಚಿತ್ರ ಬಿಡುಗಡೆಗೆ ದಿನ ನಿಗದಿಯಾಗಿದೆ. ನಾಗಶೇಖರ್ ಹಾಗೂ ದುನಿಯಾ ವಿಜಯ್ ಕಾಂಬಿನೇಷನ್‍ನಲ್ಲಿ ಮೂಡಿಬಂದಿರುವ ಮೊದಲ ಚಿತ್ರವಾದರೂ ಇಬ್ಬರಿಗೂ ಎಂದೂ ಮರೆಯಲಾಗದಂಥ ಅನುಭವಗಳನ್ನು ನೀಡಿದೆ. ಚಿತ್ರದ ಬಿಡುಗಡೆಯ ಸಂಬಂಧ ಒಂದಷ್ಟು ಮಾಹಿತಿಗಳನ್ನು ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹಂಚಿಕೊಂಡಿದೆ. ನಾಯಕ ದುನಿಯಾ ವಿಜಯ್ ಅವರ ಆತ್ಮೀಯ ಗೆಳೆಯ ಸುಂದರ್ ಪಿ. ಗೌಡ್ರು ಈ ಹಿಂದೆ ಜಾಕ್ಸನ್ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಇದು ಅವರಿಬ್ಬರ ಎರಡನೇ ಚಿತ್ರ.
ಕಾಡು, ಅಲ್ಲಿನ ಪ್ರಾಣಿಗಳ ಬಗ್ಗೆ ಹೇಳುವ ಪ್ರಯತ್ನವನ್ನು ಮಾಡಲಾಗಿರುವ ಈ ಚಿತ್ರದಲ್ಲಿ ಒಂದು ನೈಜ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ.1998ರ ಆಸುಪಾಸಿನಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಂಥ ನೈಜಘಟನೆಯನ್ನು ಈ ಸಿನಿಮಾದಲ್ಲಿ ತೆಗೆದುಕೊಳ್ಳಲಾಗಿದೆ. ನಮ್ಮ ಮುಂದಿನ ಜನರೇಷನ್‍ಗೆ ಒಂದು ವಿಷಮುಕ್ತವಾದ ಪ್ರಪಂಚವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ. ಚಿತ್ರದಲ್ಲಿ ಕಾಡಿನ ಕಥೆಯೇ ಪ್ರಮುಖವಾಗಿದೆ. ಇಲ್ಲಿ ಆನೆ, ಕುದುರೆಗಳನ್ನು ರಿಯಲ್ ಆಗಿ ಉಪಯೋಗಿಸಿದ್ದೇವೆ. ಉಳಿದಂತೆ ಹಾವು, ಚಿರತ, ಹುಲಿಯಂಥ ಪ್ರಾಣಿಗಳನ್ನು ಗ್ರಾಫಿಕ್ಸ್‍ನಲ್ಲಿ ಮೂಡಿಸಿದ್ದೇವೆ. ಪ್ರಾಣಿಗಳನ್ನು ಕುರಿತ ಸಿನಿಮಾ ಮಾಡೋದು ಅಂತ ನಿರ್ಧರಿಸಿದ ಕೂಡಲೇ ನಾನು ಹೋದದ್ದು ಅನಿಮಲ್ ಬೋರ್ಡ್‍ಗೆ.

ಅಲ್ಲಿ ನಮಗೆ ಕ್ಲಿಯರ್ ಆಗಿ ವಿವರಗಳನ್ನು ಹೇಳಿದರು. ನಂತರ ಅದೇರೀತಿ ಮುಂದುವರೆದಿದ್ದರಿಂದ ಯಾವ ತೊಂದರೆಯೂ ಆಗಲಿಲ್ಲ ಎಂದು ನಿರ್ದೇಶಕ ನಾಗಶೇಖರ್ ಈ ಸಿನಿಮಾ ಆರಂಭವಾದ ಹಂತಗಳನ್ನು ಹೇಳಿಕೊಂಡರು.10 ಕೋಟಿ 80 ಲಕ್ಷ ಹಣವನ್ನು ಎನ್.ಆರ್.ಐ ರೂಪದಲ್ಲಿ ನೀಡಿ ಈ ಚಿತ್ರ ವಿತರಣೆಯ ಜವಾಬ್ದಾರಿಯನ್ನು ಜಾಕ್ ಮಂಜು ಅವರು ವಹಿಸಿಕೊಂಡಿದ್ದಾರೆ. ಹುಲಿಗಳನ್ನು ಬೇಟೆಯಾಡುವ ತಂಡವೊಂದರ ಕಥೆ ಈ ಚಿತ್ರದಲ್ಲಿ ಹುಲಿಯನ್ನು ಕೊಂದು ಅದರ ಉಗುರನ್ನು ಕೂಡ ಲಕ್ಷಾಂತರ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆ ಎಂಬ ಮಾಹಿತಿ ಕೂಡ ನಿರ್ದೇಶಕ ನಾಗಶೇಖರ್‍ರಿಂದ ಬಂತು.

ನಾಯಕ್ ವಿಜಯ್ ಮಾತನಾಡಿ, ನನ್ನ ಗೆಳೆಯರ ನೆನಪು ಎಂದಿಗೂ ಮಾಸದು. ಅವರ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದೇವೆ.
ನನಗೆ ಈ ಚಿತ್ರದಲ್ಲಿ ಐದು ಗೆಟಪ್‍ಗಳಿವೆ. ನಾನು ಮುಂದೆಯೂ ಇಂಥ ಪಾತ್ರ ಮಾಡುತ್ತೇನೋ ಇಲ್ಲವೊ ಗೊತ್ತಿಲ್ಲ. ಒಂದು ಒಳ್ಳೆ ಮೆಸೇಜ್ ಈ ಚಿತ್ರದಲ್ಲಿದೆ. ನಾನು ತುಂಬಾ ಇಷ್ಟಪಟ್ಟು ಮಾಡಿದಂಥ ಚಿತ್ರವಿದು ಎಂದು ಹೇಳಿದರು.ಇನ್ನು ಈ ಚಿತ್ರಕ್ಕೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಸಾಧು ಕೋಕಿಲಾ ಅವರು ಈಗಾಗಲೇ ಈ ಚಿತ್ರವನ್ನು ವೀಕ್ಷಿಸಿದ್ದು, ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಯಿದೆ ಎನ್ನುತ್ತ ಇದೊಂದು ಮೈಲುಗಲ್ಲಿನ ಚಿತ್ರವಾಗಲಿದೆ. ಈ ಚಿತ್ರಕ್ಕೆ ದುಡಿದಂತಹ ತಾಂತ್ರಿಕ ವರ್ಗದವರ ಕೆಲಸವನ್ನು ಮೆಚ್ಚಲೇಬೇಕು. ಚಿತ್ರದ ಛಾಯಾಗ್ರಾಹಕ ಸತ್ಯ ಹೆಗಡೆ ಬಹಳ ಉತ್ತಮವಾಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಖಂಡಿತ ಈ ಚಿತ್ರವು ಪ್ರತಿಯೊಬ್ಬರ ಹೃದಯವನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಉಳಿದಂತೆ ನಟ -ರವಿಶಂಕರ್ ಹಾಗೂ ಜೇಂಕಾರ್ ಮೂವಿಸ್‍ನ ಭರತ್‍ಜೈನ್ ಚಿತ್ರದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin